ನಿಡ್ಪಳ್ಳಿ : ಸಾಂಕ್ರಾಮಿಕ ರೋಗ ಬಾರದಂತೆ ಪರಿಸರವನ್ನು ಸ್ವಚ್ಚವಾಗಿಡಬೇಕು ಎಂದು ಸರಕಾರ, ಸಂಘಸಂಸ್ಥೆಗಳು ಸ್ವಚ್ಚತಾ ಆಂದೋಲನದ ಮೂಲಕ ಜನರನ್ನು ಎಚ್ಚರಿಸುತ್ತಿರುವುದು ಒಂದು ಕಡೆಯಾದರೆ ಅದರ ಅರಿವು ಇಲ್ಲದೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಜನ ಇನ್ನೊಂದೆಡೆ.

ರೆಂಜ ಮುಡ್ಪಿನಡ್ಕ ರಸ್ತೆಯ ಪಳಂಬೆ ಎಂಬಲ್ಲಿ ರಸ್ತೆ ಬದಿ ಎರಡು ಗೋಣಿ ಚೀಲದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ಹಾಕಿರುವುದು ಮೆ.2 ರಂದು ಕಂಡು ಬಂದಿದೆ.ಈ ರೀತಿ ತ್ಯಾಜ್ಯ ಎಸೆಯುವುದು ಅಕ್ಷಮ್ಯ ಅಪರಾಧ ಎಂದು ತ್ಯಾಜ್ಯ ಎಸೆಯುವವರಿಗೆ ತಿಳಿಯಲಿ. ಅಂತವರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.