ನಿಡ್ಪಳ್ಳಿ: ಇಲ್ಲಿಯ ಕಾನ ನಿವಾಸಿ ಡೊಂಬಯ ಪೂಜಾರಿ (65 ವ) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಮೇ.3ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಅನೇಕ ವರ್ಷಗಳಿಂದ ಮೂರ್ತೆದಾರರಾಗಿ ಕೆಲಸ ಮಾಡುತ್ತಿದ್ದರು.
ಮೃತರು ಪತ್ನಿ ಯಮುನ, ಪುತ್ರರಾದ ಶ್ರೀಕುಮಾರ್, ಶ್ರೀಅನೂಪ್, ಶ್ರೀಪುಷ್ಪರಾಜ್, ಸೊಸೆಯಂದಿರಾದ ರಮ್ಯ, ಪೂಜಾ, ಭವ್ಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.