ಸವಣೂರು : ದೇಶದಲ್ಲೇ ಪ್ರಪ್ರಥಮವಾಗಿ ಪುತ್ತೂರಿನಲ್ಲಿ ಜಾರಿಗೊಳಿಸಲು ಯೋಜಿಸಿರುವ ಹಿಂದೂ ಧರ್ಮ ಶಿಕ್ಷಣ ತರಗತಿಗಳಿಗೆ ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಧಾರ್ಮಿಕ ಶಿಕ್ಷಣದ ಮಾರ್ಗದರ್ಶಕರೂ, ಪ್ರೇರಕರೂ ಆದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಧರ್ಮ ಶಿಕ್ಷಣ ತರಗತಿ ಧರ್ಮಾಭ್ಯುದಯವನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಾಲ್ತಾಡಿ ಗ್ರಾಮದಿಂದ ಅಲ್ಯಾಡಿ ಅಯ್ಯಪ್ಪ ಭಜನಾ ಮಂದಿರ, ಮಂಜುನಾಥನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ, ಚೆನ್ನಾವರ ಶ್ರೀ ಉಳ್ಳಾಕುಲು ದೈವಸ್ಥಾನದ ಕೇಂದ್ರೀಕರಿಸಿ ಮೂರು ತಂಡಗಳಾಗಿ ಸುಮಾರು 117 ಮಂದಿ ಪಾಲ್ಗೊಂಡಿದ್ದರು.

ಹಿಂದೂ ಧರ್ಮ ಶಿಕ್ಷಣ ಸಮಿತಿಯ ಪಾಲ್ತಾಡಿ ಗ್ರಾಮ ಸಮಿತಿ ಸಂಚಾಲಕ ಸುಬ್ರಾಯ ಗೌಡ ಪಾಲ್ತಾಡಿ, ಅಧ್ಯಕ್ಷ ಪದ್ಮಪ್ರಸಾದ್ ಕಲಾಯಿ, ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಖಜಾಂಚಿ ಜಯಪ್ರಶಾಂತ್ ಪಲ್ಲತ್ತಡ್ಕ, ಉಪಾಧ್ಯಕ್ಷರಾದ ಯತೀಶ್ ಪಲ್ಲತ್ತಡ್ಕ ,ಇಂದಿರಾ ಬಿ.ಕೆ.ಬಂಬಿಲ ಮೊದಲಾದವರಿದ್ದರು.