1979 ರಲ್ಲಿ ನ್ಯಾಯಮೂರ್ತಿ ಕೆ ಎಸ್ ಹೆಗ್ಡೆ ಅವರಿಂದ ಸ್ಥಾಪಿಸಲ್ಪಟ್ಟ ನಿಟ್ಟೆ ವಿದ್ಯಾಸಂಸ್ಥೆ, ಇದೀಗ ವಿಶ್ವವಿದ್ಯಾಲಯವಾಗಿ ಬೆಳೆದು, ಭಾರತದ ಪ್ರಮುಖ ಉನ್ನತ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯಾಗಿ ಹೆಸರು ಪಡೆದಿದೆ. ಮಂಗಳೂರು, ನಿಟ್ಟೆ ಮತ್ತು ಬೆಂಗಳೂರಿನಲ್ಲಿರುವ 44 ಸಂಸ್ಥೆಗಳಲ್ಲಿ 160ಕ್ಕೂ ಹೆಚ್ಚು ಕೋರ್ಸ್ಗಳನ್ನು ನೀಡುತ್ತಿದ್ದು, ನಿಟ್ಟೆ ವಿಶ್ವವಿದ್ಯಾಲಯ NIRF 2024 ರಲ್ಲಿ 66ನೇ ಸ್ಥಾನ, NAAC ನಿಂದ A+ ಗ್ರೇಡ್ನೊಂದಿಗೆ ಮಾನ್ಯತೆ ಪಡೆದು ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.
ನಿಟ್ಟೆ ವಿಶ್ವವಿದ್ಯಾನಿಲಯವು ಕ್ರಿಯಾತ್ಮಕ ಕಲಿಕಾ ವಾತಾವರಣಕ್ಕೆ ನೆಲೆಯಾಗಿದೆ. ವೈದ್ಯಕೀಯ, ದಂತವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಪೈಲಟ್ ಟ್ರೈನಿಂಗ್, ಫಾರ್ಮಸಿ, ಫಿಸಿಯೋಥೆರಪಿ, ನರ್ಸಿಂಗ್, ಬೈಯೋಮೆಡಿಕಲ್ ಸೈನ್ಸ್ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನಗಳನ್ನು ಅನುಸರಿಸುವ ವಿದ್ಯಾರ್ಥಿಗಳಿಗೆ 1200 ಹಾಸಿಗೆಗಳ NABH-ಮಾನ್ಯತೆ ಪಡೆದ ಕೆ ಎಸ್ ಹೆಗ್ಡೆ ಆಸ್ಪತ್ರೆ ಮತ್ತು 23 ಆರೋಗ್ಯ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ.
ನಿಟ್ಟೆಯ NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMAMIT) ದೇಶಾದ್ಯಂತ ಎಂಜಿನಿಯರಿಂಗ್ ಆಕಾಂಕ್ಷಿಗಳನ್ನು ಆಕರ್ಷಿಸುತ್ತಲೇ ಇದೆ. ಅತ್ಯುತ್ತಮ ಮೂಲಸೌಕರ್ಯ, ಅತ್ಯುತ್ತಮ ಉದ್ಯೋಗ ದಾಖಲೆಗಳು ಮತ್ತು ರೊಬೊಟಿಕ್ಸ್, ಏರೋಮಾಡೆಲಿಂಗ್ ಮತ್ತು ನಾವೀನ್ಯತೆಯಲ್ಲಿ ವಿದ್ಯಾರ್ಥಿಗಳ ಉತ್ಸಾಹಭರಿತ ಚಟುವಟಿಕೆಗಳೊಂದಿಗೆ, NMAMIT ಮಹತ್ವಾಕಾಂಕ್ಷಿ ಎಂಜಿನಿಯರ್ಗಳಿಗೆ ಸೂಕ್ತ ವಾತಾವರಣವನ್ನು ನೀಡುತ್ತದೆ. ಆಸ್ಟ್ರೇಲಿಯಾ ಹಾಗು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದೊಂದಿಗೆ ಅಂತರರಾಷ್ಟ್ರೀಯ ಡ್ಯುಯಲ್-ಡಿಗ್ರಿ ಬಿಟೆಕ್ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ.
ವಿಶ್ವವಿದ್ಯಾಲಯವು NUCAT ಹಾಗು 12ನೇ ತರಗತಿಯ ಅಂಕಗಳ ಆಧಾರದ ಮೇಲೆ ತನ್ನ ಬಿಟೆಕ್ ಕಾರ್ಯಕ್ರಮಗಳಿಗೆ ಎರಡು ರೀತಿಯ ವಿದ್ಯಾರ್ಥಿವೇತನಗಳನ್ನು ನೀಡುತ್ತದೆ (1) ಮೆರಿಟ್-ಕಮ್-ಮೀನ್ಸ್ ವಿದ್ಯಾರ್ಥಿವೇತನವು ಅರ್ಹ ಅಭ್ಯರ್ಥಿಗಳಿಗೆ 100% ಬೋಧನಾ ಶುಲ್ಕ ವಿನಾಯಿತಿಯನ್ನು ನೀಡುತ್ತದೆ (2) ಮೆರಿಟ್ ವಿದ್ಯಾರ್ಥಿವೇತನವು ಪ್ರೀಮಿಯರ್ ಬ್ರಾಂಚ್ ಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 40%ವರೆಗೆ ಬೋಧನಾ ಶುಲ್ಕ ವಿನಾಯಿತಿಯನ್ನು ನೀಡುತ್ತದೆ.
ಮೇ 10, 2025 ರಂದು (ಶನಿವಾರ) ಮಧ್ಯಾಹ್ನ 3 ಗಂಟೆಗೆ ಪುತ್ತೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಲಿರುವ ನಿಟ್ಟೆ ಮೀಟ್ & ಗ್ರೀಟ್ ಕಾರ್ಯಕ್ರಮದಲ್ಲಿ ಟೀಮ್ ನಿಟ್ಟೆ ಜೊತೆ ಸೇರಿ, ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ. ಹೆಚ್ಚಿನ ವಿವರಗಳಿಗಾಗಿ +91 81473 65630 ಸಂಪರ್ಕಿಸಿ ಅಥವಾ apply.nitte.edu.in ಗೆ ಭೇಟಿ ನೀಡಿ.