ʼಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿʼ – ಇಲಾಖಾಧಿಕಾರಿಗಳಿಗೆ ತಾ|ಉಸ್ತುವಾರಿ ಅಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ ಸೂಚನೆ

0

ಪುತ್ತೂರು:ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು.ನಿಮ್ಮಲ್ಲಿಯೇ ಆಗುವುದಾದರೆ ನೀವು ಮಾಡಿ.ಆಗದಿದ್ದರೆ ಮೇಲಾಧಿಕಾರಿಗಳಿಗೆ ತಿಳಿಸಿ,ಮೇಲಾಧಿಕಾರಿಗಳಿಗೂ ಆಗದಿದ್ದರೆ ಸರಕಾರದ ಮಟ್ಟದಲ್ಲಿ ಗಮನಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಪುತ್ತೂರು ತಾಲೂಕಿನ ಉಸ್ತುವಾರಿ ಅಧಿಕಾರಿಯಾಗಿರುವ ನಗರಾಭಿವೃದ್ದಿ ಇಲಾಖೆಯ ಜಂಟಿ ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಪುತ್ತೂರು ತಾಲೂಕು ಪಂಚಾಯತ್ ಕಿರು ಸಭಾಂಗಣದಲ್ಲಿ ಮೇ.6ರಂದು ನಡೆದ, ವಸತಿ ನಿಲಯಗಳ ನಿರ್ವಹಣೆ ಮತ್ತು ಕುಡಿಯುವ ನೀರಿನ ಸಮಸ್ಯೆ ಮತ್ತು ಪ್ರಾಕೃತಿಕ ವಿಕೋಪದ ಮುನ್ನೆಚ್ಚರಿಕೆ ಕುರಿತ ಸಭೆಯಲ್ಲಿ ಅವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶಾಲೆಗಳ ಕಟ್ಟಡಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.ಜನರ ದೂರುಗಳಿಗೆ ಸರಿಯಾದ ಸ್ಪಂದನೆಯನ್ನು ನೀಡಬೇಕು.ವಸತಿ ನಿಲಯಗಳಲ್ಲಿ ನಿರ್ವಹಣೆಯ ಶಿಕ್ಷಣ ನೀಡಬೇಕು.ಭೂಕುಸಿತ, ಚರಂಡಿ ನಿರ್ವಹಣೆ ಸೇರಿ ಮಳೆಗಾಲದ ಬಗ್ಗೆ ಮುನ್ನೆಚ್ಚರಿಕೆಯನ್ನು ಈಗಲೇ ವಹಿಸಬೇಕು.ಅಗತ್ಯ ಯಂತ್ರೋಪಕರಣಗಳನ್ನು ಸನ್ನದ್ದ ಸ್ಥಿತಿಯಲ್ಲಿಟ್ಟುಕೊಳ್ಳಬೇಕು.ಎಲ್ಲವೂ, ನನ್ನ ವ್ಯಾಪ್ತಿ ಇಷ್ಟು ಎಂಬುದಕ್ಕಿಂತ ಹೆಚ್ಚಿನ ಆದ್ಯತೆ ನೀಡಿ ತಮ್ಮ ಇನ್‌ವಾಲ್‌ಮೆಂಟ್ ತೋರಿಸಿ ಎಂದು ನಿರ್ದೇಶಿಸಿದರು.ಪುತ್ತೂರು ತಾಲೂಕು ಸ್ವಚ್ಛತೆಗೆ ನ್ಯಾಷನಲ್ ಲೆವೆಲ್‌ಗೆ ರೀಚ್ ಆಗಿದೆ.ಅದಕ್ಕೆ ಕಾರಣ ಇಲ್ಲಿನ ಇಒ ಮತ್ತು ಅಧಿಕಾರಿ ವರ್ಗದವರ ಯೋಜನೆಗಳು.ಇಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪ್ರಥಮವಾಗಿ ಅಟೆಂಡ್ ಆಗಬೇಕು.ಅದಕ್ಕಾಗಿ ನೀರಿನ ಸದ್ಬಳಕೆ ಕುರಿತು ಪರಿಶೀಲಿಸಬೇಕು.ಕುಡಿಯುವ ನೀರು ಒದಗಿಸಲು ಸಾಕಷ್ಟು ಮೂಲಗಳಿವೆ.ಕೆರೆ,ಬಾವಿ,ಕೊಳವೆ ಬಾವಿ, ಕಿಂಡಿ ಅಣೆಕಟ್ಟುಗಳಿಂದ ನೀರನ್ನು ಒದಗಿಸುವ ಕೆಲಸ ಪ್ರಸ್ತುತ ನಡೆಸಲಾಗುತ್ತಿದೆ.ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು.ಬೇರೆ ಪರಿಹಾರ ದಾರಿಗಳು ಇಲ್ಲದಾಗ ಮಾತ್ರ ಟ್ಯಾಂಕರ್‌ನಲ್ಲಿ ನೀರು ಒದಗಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದ ಕೃಷ್ಣಮೂರ್ತಿಯವರು, ನೀರಿಗಾಗಿ ಪ್ರತಿಭಟನೆ ಮಾಡುವುದು, ನೀರು ಕೇಳಿದರೂ ಕೊಡುತ್ತಿಲ್ಲ ಎಂಬ ಮಾತು ಬರಬಾರದು ಎಂದು ಹೇಳಿದರು.


ತಂಡ ರಚನೆ ಮಾಡಿ:
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ತಂಡ ರಚನೆ ಮಾಡಿರುವಂತೆ ತುರ್ತು ಸ್ಪಂದನೆಗೂ ತಂಡ ರಚನೆ ಮಾಡಿ.ಆಯಾ ತಾಲೂಕು ಲೆವೆಲ್ ಅಧಿಕಾರಿ ಇದರಲ್ಲಿರಬೇಕು.ಎಲ್ಲಾ ಸಮಯದಲ್ಲೂ ಇಒ ಅಥವಾ ಮೇಲಾಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ.ಅಥವಾ ಅವರಿಗೆ ಅಟೆಂಡ್ ಆಗಲು ಕೂಡಾ ಕಷ್ಟ.ಎರಡುಮೂರು ತಾಲೂಕಿಗೊಬ್ಬ ತಾಲೂಕು ಲೆವೆಲ್ ಆಫೀಸರ್ ಇರಬೇಕು.22 ಗ್ರಾಮಗಳಿವೆ.ಪ್ರತಿ 2 ತಿಂಗಳಿಗೊಮ್ಮೆ ಹಾಸ್ಟೆಲ್ ಭೇಟಿ ಮಾಡಿ.ಅಲ್ಲಿ ಗದರಿಸಿ ಅಲ್ಲ,ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.ಅಽಕಾರಿಗಳು ನಮ್ಮನ್ನು ಕೇಳುತ್ತಾರೆಂಬ ಭಾವನೆ ಮೂಡಿದರೆ ಅಲ್ಲಿ ಸಣ್ಣ ಮಟ್ಟಿನ ಪ್ರಭಾವ ಬೀರುತ್ತದೆ.ಎಲ್ಲವೂ ಹಣದಿಂದ, ಹೆದರಿಕೆಯಿಂದ ಆಗುವುದಿಲ್ಲ.ಆಸ್ಪತ್ರೆಯಲ್ಲೂ ಎಲ್ಲವನ್ನು ವೈದ್ಯರಿಗೆ ಮಾಡಲು ಹೇಳುವುದಲ್ಲ.ಹಲವು ಕೆಲಸಗಳನ್ನು ಎನ್‌ಜಿಒ ಮೂಲಕವೂ ಮಾಡಿಸಬಹುದು.ನೀವೆಲ್ಲ ಹಾಸ್ಟಲ್ ವಿಸಿಟ್ ಮಾಡಿದರೆ ನನಗೆ ಅನುಕೂಲ.ಮುಖ್ಯ ಕಾರ್ಯದರ್ಶಿಗಳು ಈ ಕುರಿತು ಬಹಳ ಮುತುವರ್ಜಿ ವಹಿಸಿದ್ದಾರೆ ಎಂದರು.


ಪ್ರಾಕೃತಿಕ ವಿಕೋಪ ಎದುರಿಸಲು ಸಿದ್ಧರಾಗಿ:
ಮುಂದೆ ಬರುವ ಮಳೆಗಾಲದಲ್ಲಿ ಅಲ್ಲಲ್ಲಿ ಕೃತಕ ನೆರೆ, ಚರಂಡಿ ಬ್ಲಾಕ್ ಆಗುವುದನ್ನು ತಪ್ಪಿಸಬೇಕು.ನಾನು ಪುತ್ತೂರಿನಲ್ಲೇ ಎಸಿ ಆಗಿದ್ದುದರಿಂದ ಇಲ್ಲಿನ ಪ್ರಾಕೃತಿಕ ವಿಕೋಪದ ಕುರಿತು ಮಾಹಿತಿ ಇದೆ.ದೇವಸ್ಥಾನದ ಹಿಂಬದಿಯ ಕಡೆ ನೋಡಿ.ರಸ್ತೆಬದಿಯ ಮರಗಿಡಗಳು ಬೀಳುವ ಸ್ಥಿತಿಯಲ್ಲಿದ್ದರೆ ಅದನ್ನು ಅರಣ್ಯ ಇಲಾಖೆ, ಮೆಸ್ಕಾಂ ಜೊತೆಯಲ್ಲಿ ತೆರವು ಮಾಡಿ.ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ಮಾಡಿ.ಭೂಕುಸಿತದಂತಹ ದೊಡ್ಡ ಅನಾಹುತ ತಪ್ಪಿಸಲು ಸಾಧ್ಯವಿಲ್ಲ.ಆದರೆ ಕೆಲವೊಂದು ಅನಾಹುತ ತಪ್ಪಿಸಲು ಸಾಧ್ಯವಿದೆ.ಮುಂದಿನ ಸಭೆಯಲ್ಲಿ ಮಳೆಗಾಲದ ಮುಂಜಾಗ್ರತೆ ಕ್ರಮದ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ತಿಳಿಸಬೇಕೆಂದವರು ನಿರ್ದೇಶನ ನೀಡಿದರು.


ನಗರಸಭೆಯಲ್ಲಿ ನೀರಿನ ಸಮಸ್ಯೆಯಿಲ್ಲ:
ನಗರಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ.ವಾರ್ಡ್‌ಗಳಲ್ಲೂ ಯಾವುದೇ ಸಮಸ್ಯೆ ಇಲ್ಲ.ಕುಡಿಯುವ ನೀರಿನ ಸಮಗ್ರ ಯೋಜನೆ ಜಲಸಿರಿಗೆ ಹ್ಯಾಂಡ್ ಓವರ್ ಆಗಿದೆ.ತಿಂಗಳಲ್ಲಿ ಎರಡು ಬಾರಿ ನಾವು ಚೆಕ್ ಮಾಡುತ್ತೇವೆ.ಮನೆ ಮನೆಗೆ ಹೋಗಿ ಮಾಹಿತಿಯನ್ನೂ ಪಡೆಯುತ್ತಿದ್ದೇವೆ.ತುರ್ತು ನೀರಿನ ಪೂರೈಕೆಗೆ ಸಂದರ್ಭಕ್ಕೆ ಎರಡು ಟ್ಯಾಂಕರ್ ಕೂಡಾ ಇಟ್ಟುಕೊಂಡಿದ್ದೇವೆ ಎಂದು ಜಲರಿಸಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದೇಶ್ ಮತ್ತು ಸುನಿಲ್ ಜಾದವ್ ಅವರು ಮಾಹಿತಿ ನೀಡಿದರು.ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಪೈಪ್ ಅಳವಡಿಕೆಯ ಬಳಿಕ ಗುಂಡಿ ತುಂಬಿಸಿದ ಸ್ಥಳದಲ್ಲಿ ಮಣ್ಣು ಸಡಿಲಗೊಂಡು ವಾಹನಗಳಿಗೆ ತೊಂದರೆ ಆಗಿರುವ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ.ದುರಸ್ತಿ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ ಎಂದು ಹೇಳಿದರು.ತಹಸೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಽಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಸಭೆಯ ಬಳಿಕ ಹೆಚ್.ಕೆ.ಕೃಷ್ಣಮೂರ್ತಿಯವರು ತಾಲೂಕು ಆರೋಗ್ಯಾಽಕಾರಿ ಡಾ.ದೀಪಕ್ ರೈ ಅವರ ಜೊತೆ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.

ಪತ್ರಿಕೆಯಲ್ಲಿ ಬಂದ ವರದಿಗೆ ಸ್ಪಂದಿಸಿ
ಸಮಸ್ಯೆ,ಬೇಡಿಕೆ ಕುರಿತು ಪತ್ರಿಕೆಯಲ್ಲಿ ಏನಾದರೂ ವರದಿ ಬಂತೆಂದರೆ ಅದಕ್ಕೆ ಅಧಿಕಾರಿಗಳು ಸ್ಪಂದಿಸುವ ಕೆಲಸ ಆಗಬೇಕು.ರಸ್ತೆ ದುರಸ್ತಿ, ನೀರಿನ ಕೊರತೆ, ಕಂದಾಯ ಇಲಾಖೆಯ ಸಮಸ್ಯೆ ಕುರಿತು ವರದಿ ಬಂದಾಗ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸ್ಪಂದಿಸುವ ಕೆಲಸ ಮಾಡಿ.ನಿಮ್ಮ ಹಂತದಲ್ಲಿ ಆದರೆ ಮಾಡಿ.ಇಲ್ಲವಾದರೆ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ. ಗೊತ್ತಾಗದಿದ್ದರೆ ಪತ್ರಿಕೆಯವರಲ್ಲೇ ಕೇಳಿ.ಅವರೂ ಮಾಹಿತಿ ನೀಡುತ್ತಾರೆ.ನೀವು ಸಮಸ್ಯೆಗೆ ಪರ್ಸನಲೀ ಅಟೆಂಡ್ ಆಗಿರುವುದು ಗೊತ್ತಾದರೆ ಪತ್ರಿಕೆಯಲ್ಲಿ ಮತ್ತೆ ನಿಮ್ಮ ಸ್ಪಂದನೆಯ ವರದಿಯೂ ಬರುತ್ತದೆ.ಒಟ್ಟಿನಲ್ಲಿ ಪತ್ರಿಕೆಯವರು ವೈಯಕ್ತಿಕವಾಗಿ ಬರೆಯುವುದಿಲ್ಲ.ಜನರು ಹೇಳುವುದನ್ನು ಬರೆಯುತ್ತಾರೆ ಎಂದು ತಿಳಿದುಕೊಳ್ಳಿ ಎಂದು ಉಸ್ತುವಾರಿ ಅಽಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಸಭೆಯಲ್ಲಿ ಅಽಕಾರಿಗಳಿಗೆ ಸಲಹೆ ನೀಡಿದರು.

LEAVE A REPLY

Please enter your comment!
Please enter your name here