ಬೆಟ್ಟಂಪಾಡಿ: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿಹಬ್ಬದ ಸಲುವಾಗಿ ಜಿಲ್ಲಾ ಮಟ್ಟದ ಮಕ್ಕಳ ಕ್ರಿಯಾತ್ಮಕ ಸನಿವಾಸ ಕಲಾ ಸಂಭ್ರಮ ʻವರ್ಣದರ್ಶಿನಿʼ ಮೇ 10 ರಿಂದ ಮೇ 14 ರವರೆಗೆ ನಡೆಯಲಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೊಂಕೋಡಿ ಕೃಷ್ಣ ಭಟ್, ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಮತ್ತು ಸಂಸ್ಕೃತ ವಿದ್ವಾಂಸ ಅವಿನಾಶ್ ಕೊಡಂಕಿರಿ, ಪ್ರಾಧ್ಯಾಪಕರಾದ ಹರಿಪ್ರಸಾದ್ ಹೆಚ್., ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ರಾವ್, ವಿವೇಕಾನಂದ ವಿದ್ಯಾಸಂಸ್ಥೆಗಳ ಸಹ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ, ನ್ಯಾಯವಾದಿ ಸಮಾಜಸೇವಕ ಚಿಂತಕ ಚಿದಾನಂದ ಬೈಲಾಡಿ ಇವರುಗಳು ಮಕ್ಕಳೊಂದಿಗೆ ಸಂಸ್ಕಾರ, ಜ್ಞಾನ, ಪ್ರತಿಭೆಯ ಬಗ್ಗೆ ಮಾತನಾಡಲಿದ್ದಾರೆ.
ದೆಹಲಿಯಲ್ಲಿ ನಡೆದ ಸರಕಾರಿ ನೌಕರರ ರಾಷ್ಟ್ರೀಯ ರಂಗೋತ್ಸವಕ್ಕೆ ಆಯ್ಕೆಯಾದ ಶಿಕ್ಷಕ ರಮೇಶ್ ಉಳಯ, ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದಿಂದ ನಡೆದ ಮಕ್ಕಳ ರಾಷ್ಟ್ರೀಯ ರಂಗೋತ್ಸವದಲ್ಲಿ ಪಾಲ್ಗೊಂಡ ಮುಖ್ಯ ಶಿಕ್ಷಕ ತಾರನಾಥ್ ಸವಣೂರು, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾ ಶಿಕ್ಷಕ ಭಾಸ್ಕರ್ ನೆಲ್ಯಾಡಿ, ದಿಶಾ ಯೋಗ ಫೌಂಡೇಶನ್ ಪುತ್ತೂರು ಇದರ ಚಂದ್ರಶೇಖರ್ ದೇಲಂಪಾಡಿ. ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ವಿಸ್ಮಯ ಜಾದೂ ಬಳಗದ ಸದಸ್ಯರಾಗಿದ್ದ ಶಿಕ್ಷಕ ಚರಣ ಕುಮಾರ್ ಪುದು, ದೆಹಲಿಯಲ್ಲಿ ನಡೆದ ಸರ್ಕಾರಿ ನೌಕರರ ರಾಷ್ಟ್ರಮಟ್ಟದ ರಂಗೋತ್ಸವಕ್ಕೆ ಆಯ್ಕೆಯಾದ ಶಿಕ್ಷಕ ರಾಮ್ ನಾಯ್ಕ್ ಕೊಜಪ್ಪೆ, ಹಿರಿಯ ಕರಕುಶಲ ಶಿಕ್ಷಕಿ ಶ್ರೀಮತಿ ರೋಹಿಣಿ ರಾಘವ್ ನೆಹರೂನಗರ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ರಂಜಿತ್ ಕುಂಬ್ರ, ವಿವೇಕಾನಂದ ವಿದ್ಯಾಸಂಸ್ಥೆಗಳ ಪರಿವೀಕ್ಷಣಾಧಿಕಾರಿ ರಘುರಾಜ್ ಉಬರಡ್ಕ, ಸಾವಯವ ಕೃಷಿ ಸಾಧಕ ಹರಿಕೃಷ್ಣ ಕಾಮತ್ ಮುಡಿಪಿನಡ್ಕ ಮುಂತಾದ ಪ್ರತಿಭಾನ್ವಿತ ಶಿಕ್ಷಕರು, ತರಬೇತುದಾರರು ಮಕ್ಕಳೊಂದಿಗೆ ನಾಟಕ, ಜನಪದ ನೃತ್ಯ, ಚಿತ್ರಕಲೆ, ಕರಕುಶಲ, ರಂಗವಲ್ಲಿ, ಯೋಗ, ಪುರಾಣ ಕಥೆಗಳು, ಕೃಷಿ, ಸಂಗೀತ ಮೌಲ್ಯ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಬೆಳ್ಳಿಹಬ್ಬದ ಸಂಭ್ರಮದ ಶಾಲೆ
ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಗ್ರಾಮೀಣ ಭಾಗದ ಶಾಲೆ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಇಂದು ಶೈಕ್ಷಣಿಕ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ವೃಂದವನ್ನು ಹೊಂದಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶೈಕ್ಷಣಿಕವಾಗಿ ಕಳೆದ 9 ವರ್ಷಗಳಿಂದ ಸತತ ಶೇ. 100 ಫಲಿತಾಂಶ ದಾಖಲಾಗುತ್ತಿದೆ. ಅಲ್ಲದೇ ಗುಣಾತ್ಮಕ ಫಲಿತಾಂಶವನ್ನೂ ನಿರಂತರವಾಗಿ ಕಾಯ್ದುಕೊಂಡುಬಂದಿದೆ.
ಶಿಬಿರದಲ್ಲಿ ಏನೆಲ್ಲಾ ಇರಲಿವೆ ?
ಮೇ 10 ರಂದು ಸಂಜೆ 6.30 ಗಂಟೆಗೆ ಉದ್ಘಾಟನಾ ಸಮಾರಂಭ ʻಆರಂಭದರ್ಶಿನಿʼ ನಡೆಯಲಿದೆ. ಮೇ 11 ರಂದು ʻಸಂಸ್ಕಾರ ದರ್ಶಿನಿʼ, ಮೇ 12 ರಂದು ʻಜ್ಞಾನದರ್ಶಿನಿʼ, ಮೇ 13 ರಂದು ಪ್ರತಿಭಾದರ್ಶಿನಿʼ, ಮೇ 14 ರಂದು ಬೆಳಿಗ್ಗೆ ʻಆನಂದದರ್ಶಿನಿʼ ಬಳಿಕ ʻಮುಕ್ತಾಯದರ್ಶಿನಿʼ ನಡೆಯಲಿದೆ.
ʻವರ್ಣದರ್ಶಿನಿʼ ಯ ಪ್ರತಿದಿನದ ಚಟುವಟಿಕೆಗಳು
ಪ್ರತಿದಿನ ಬೆಳಿಗ್ಗೆ 5.30 ರಿಂದ 6.30 ರವರೆಗೆ ಯೋಗ, 7 ರಿಂದ 8 – ಉಪಾಹಾರ, 8.30 ರಿಂದ ನಾಟಕ ತರಬೇತಿ, 11 ರಿಂದ ಬಿತ್ರ, ಕರಕುಶಲ, ರಂಗೋಲಿ, ಮಧ್ಯಾಹ್ನ 1 ರಿಂದ ಭೋಜನ ವಿರಾಮ, ಅಪರಾಹ್ನ 2 ರಿಂದ ವೀರಗಾಸೆ, ಕಂಸಾಳೆ, ಕರಗೋಲು, ನೃತ್ಯ ತರಬೇತಿ, ಸಂಜೆ 5 ರಿಂದ ಮಾತುಕತೆ, 6 ರಿಂದ ಕೃಷಿ, 6.30 ರಿಂದ ನಾಟಕ ತರಬೇತಿ, 7.30 ರಿಂದ ನಿತ್ಯಕರ್ಮಗಳು, 9 ರಿಂದ ಭೋಜನ ವಿರಾಮ ರಾತ್ರಿ 10 ರಿಂದ 11 ರವರೆಗೆ ʻಪುರಾಣ ದರ್ಶಿನಿʼ ನಡೆಯಲಿದೆ.
ಯಾರೆಲ್ಲಾ ಭಾಗವಹಿಸಬಹುದು ?
ಮಕ್ಕಳಲ್ಲಿ ಕ್ರಿಯಾತ್ಮಕ ಕಲಾ ಪ್ರತಿಭೆ ಹೆಚ್ಚಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಯಾವುದೇ ಶಾಲೆಗಳ 6 ರಿಂದ 9 ನೇ ತರಗತಿಯವರೆಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಶಿಬಿರಾರ್ಥಿಗಳು ಮೇ 10 ರಂದು ಸಂಜೆ 5 ಗಂಟೆಯೊಳಗೆ ಶಾಲೆಯಲ್ಲಿ ಹಾಜರಿರಬೇಕು ಎಂದು ಶಾಲಾ ಮುಖ್ಯಗುರು ರಾಜೇಶ್ ಎನ್. ತಿಳಿಸಿದ್ದಾರೆ. ಶಿಬಿರದಲ್ಲಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ 9148604158, 7760312260, 8105880412 ಸಂಪರ್ಕಿಸಬಹುದಾಗಿದೆ.