ಪುತ್ತೂರು: ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ‘ಅಪರೇಷನ್ ಸಿಂಧೂರ್’ ಹೆಸರಿನಲ್ಲಿ ನಡೆದ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿರುವ ನಮ್ಮ ಹೆಮ್ಮೆಯ ಸೇನಾ ಯೋಧರಿಗೆ ಒಳಿತಾಗಲಿ, ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂದು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಮುಜಿರಾಯಿ ಸಚಿವರ ಸೂಚನೆಯಂತೆ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀ ಕುಕ್ಕಿನಡ್ಕ ಸುಬ್ರಾಯ ಭಜನಾ ಮಂಡಳಿ ವತಿಯಿಂದ ಶ್ರೀ ದೇವರಿಗೆ ಇದೇ ಸಂದರ್ಭದಲ್ಲಿ ವಿಶೇಷ ಭಜನೆಯನ್ನೂ ಸಮರ್ಪಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕಣ್ಣಾರಾಯ ಬನೇರಿ ಅವರು ಪ್ರಾರ್ಥನೆ ಸಲ್ಲಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುನಾಥ ಶೆಟ್ಟಿ ಪೊನೋನಿ, ಪದ್ಮಯ್ಯ ಗೌಡ ಗುತ್ತಿನಪಾಲು, ಧನಂಜಯ ಕುಲಾಲ್ ಕಂಪ, ಪ್ರಬಂಧಕ ಪ್ರಸಾದ ಬೈಪಾಡಿತ್ತಾಯ, ಭಕ್ತಾದಿಗಳಾದ ಸುಪ್ರೀತ್ ಕಣ್ಣಾರಾಯ ಬನೇರಿ, ವಿಶ್ವನಾಥ ಗೌಡ ಎಲಿಯ, ಪುಟ್ಟಣ್ಣ ಗೌಡ ಗುತ್ತಿನಪಾಲು, ರಾಮಣ್ಣ ಗೌಡ ಮುಂಡೂರು, ಜಯಾನಂದ ಆಳ್ವ ಪಟ್ಟೆ, ಮನೋಹರ ಆಳ್ವ ಪಟ್ಟೆ, ವಿನಯ ಗೌಡ ಅಂಬಟ, ಅಶೋಕ್ ಗೌಡ ಅಂಬಟ, ಜಯಪ್ರಕಾಶ್ ರೈ ಚೆಲ್ಯಡ್ಕ, ಪವಿತ್ರ ಕುಲಾಲ್, ಅಶ್ವಿನಿ ಮುಂಡೂರು, ಲೀಲಾವತಿ ಕೊಡಂಕಿರಿ, ರೇವತಿ ಕಲ್ಲಗುಡ್ಡೆ, ಶೋಭಾ ಗುತ್ತಿನ ಪಾಲು, ಸಮರ್ಥ್ ಕುಲಾಲ್, ಯಥಾರ್ಥ್, ಮನ್ವಿತ್, ಅಕ್ಷರ, ಯಜ್ಞಾ, ಘಹನ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.