ಉಪ್ಪಿನಂಗಡಿ: ಅಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದೊಂದಿಗೆ ಪ್ರತಿಕಾರಕ್ಕೆ ಮುಂದಾಗಿರುವ ಭಾರತೀಯ ಯೋಧರಿಗೆ ಒಳಿತಾಗಲಿ, ಯದ್ಧದಲ್ಲಿ ಜಯ ಪ್ರಾಪ್ತವಾಗಲಿ ಹಾಗೂ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂಬ ಸಂಕಲ್ಪದೊಂದಿಗೆ ಭಾರತೀಯ ಸೇನೆಯ ಹೆಸರಿನಲ್ಲಿ ಮೇ.8ರಂದು ಉಪ್ಪಿನಂಗಡಿಯ ಪದಾಳ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಾಲಯದ ಅರ್ಚಕ ಕೇಶವರಾಜ ಅವರ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ ದೇವಾಲಯದ ಆಡಳಿತ ಮೊಕ್ತೇಸರ ಉದಯಶಂಕರ ಭಟ್ಟ ಪದಾಳ, ಆಡಳಿತ ಸಮಿತಿಯ ಸುರೇಶ್ ಅತ್ರೆಮಜಲು, ರಾಮಚಂದ್ರ ಮಣಿಯಾಣಿ, ಲಕ್ಷ್ಮಣ ಗೌಡ ನೆಡ್ಚಿಲ್, ಸದಾನಂದ ಶೆಟ್ಟಿ ಕಿಂಡೋವು, ಧರ್ನಪ್ಪ ನಾಯ್ಕ ಬೊಳ್ಳಾವು, ಪ್ರಮುಖರಾದ ಮಂಜುನಾಥ ಭಟ್, ಹರೀಶ್ ಪಟ್ಲ, ಪ್ರಶಾಂತ್ ಪುಳಿತ್ತಡಿ ಮತ್ತಿತರರು ಉಪಸ್ಥಿತರಿದ್ದರು.