ಪುತ್ತೂರು: ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ(ಕೆಐಸಿ) ಕುಂಬ್ರ ಇಲ್ಲಿ 2025-26ನೇ ಸಾಲಿನ ದಾಖಲಾತಿ ಪ್ರಾರಂಭಗೊಂಡಿದೆ. ಕೌಸರಿ ಕೋರ್ಸ್ ಎಸ್ಸೆಸ್ಸೆಲ್ಸಿ ನಂತರ ಆಲಿಮ್ ಕೋರ್ಸ್ ಜೊತೆಗೆ ಕಾಲೇಜು ಶಿಕ್ಷಣ ವ್ಯವಸ್ಥೆಯಿದೆ. ಸುಸಜ್ಜಿತ ಹಾಸ್ಟೆಲ್, ಆಹಾರ ಸೌಲಭ್ಯ, ವಿಶಾಲ ಲೈಬ್ರರಿ, ಭಾಷಣ, ಲೇಖನ, ಸಂವಾದ, ಕಲೆಗಳಲ್ಲಿ ತರಬೇತಿ, ತಾಂತ್ರಿಕ ಶಿಕ್ಷಣ, ರೆಗ್ಯುಲರ್ ಸ್ಟ್ರೀಮಿನಲ್ಲಿ ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿಯಿಂದ ಡಿಗ್ರಿ ವರೆಗೆ ಇಂಗ್ಲೀಷ್, ಉರ್ದು, ಅರೇಬಿಕ್, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಪರಿಣತಿ, ಸ್ಮಾಶ್ ಸಿಲಬಸ್ ಅನುಸಾರ ಸಿವಿಲ್ ಸರ್ವಿಸ್ ಕೋಚಿಂಗ್ ನೀಡಲಾಗುತ್ತದೆ. ಪ್ರವೇಶಾತಿ ಪರೀಕ್ಷೆ ಮೇ.12ರಂದು ಕುಂಬ್ರ ಕೆಐಸಿಯಲ್ಲಿ ಬೆಳಿಗ್ಗೆ ಗಂಟೆ 8.30ರಿಂದ ನಡೆಯಲಿದ್ದು ಹೆಚ್ಚಿನ ಮಾಹಿತಿಗಾಗಿ ಮೊ: 9611818746, 8495948738 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
