ಕಾಣಿಯೂರು ಪ್ರಾ.ಶಾಲಾ ಮುಖ್ಯಗುರು ಬಾಲಕೃಷ್ಣರವರ‌ ನಿವಾಸದಲ್ಲಿ ಸನ್ಮಾನ‌ ಸಂಭ್ರಮ

0

ಪುತ್ತೂರು: ಕಾಣಿಯೂರು ಪ್ರಾಥಮಿಕ‌ ಶಾಲಾ ಮುಖ್ಯಗುರು ಬಾಲಕೃಷ್ಣ ಕೆ ರವರ ಬ್ರಹ್ಮಶ್ರೀ ನಿಲಯ ನೂಜಾಡಿಯಲ್ಲಿ ಮೇ.10ರಂದು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ, ಸ ಉ ಹಿ ಪ್ರಾ ಶಾಲೆ ಸವಣೂರು ಶಾಲೆಯ ನಿಕಟ ಪೂರ್ವ ಅಧ್ಯಕ್ಷರುಗಳಾದ ಶಿವರಾಮ ಗೌಡ ಮೆದು, ಚಂದ್ರಶೇಖರ ಮೆದು, ಅಂತಾರಾಷ್ಟ್ರೀಯ ಕ್ರೀಡಾಪಟು ಪುಷ್ಪವತಿ ಕೇಕುಡೆ, ನಿವೃತ್ತ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ನಾರಾಯಣ ಬಿ ಡಿ, 42 ಕಿ. ಮೀ ಮ್ಯಾರಾಥನ್ ಓಟದಲ್ಲಿ 25 ಸಲ ಪ್ರಥಮ ಸ್ಥಾನ ಗಳಿಸಿದ ದೈ ಶಿ ಶಿಕ್ಷಕ ಚಂದ್ರಶೇಖರ ಬಿಳಿನೆಲೆ, ಹರೀಶ್‌‌ ಶಾಂತಿ, ಬ್ಯಾಂಕ್ ಆಫ್ ಬರೋಡ ಕಾಣಿಯೂರು ಶಾಖೆಯ ಉದ್ಯೋಗಿ ಅಕ್ಷತಾ ರಾಧಾಕೃಷ್ಣ ನೂಜಾಡಿ ಇವರನ್ನು ಗೌರವಿಸಲಾಯಿತು. ಹಾಗೂ ಈ ವರ್ಷದ ಹತ್ತನೇ ತರಗತಿಯಲ್ಲಿ 611ಅಂಕಗಳನ್ನು ಪಡೆದ ಮಾನ್ವಿ ಜಿ. ಸುಲಾಯ ದೇವಸ್ಯ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಜಿಡೆಕಲ್ಲು ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ ಶ್ರೀ ಸುಬ್ಬಪ್ಪ ಕೈಕಂಬ, ನಿವೃತ್ತ ವೀರ ಯೋಧ ನವೀನ್ ಕುಮಾರ್ ಎ ಕೆ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ ಬಾಮೂಲೆ ಮತ್ತು ನಿವೃತ್ತ ಪ್ರೌಢಶಾಲಾ ಶಿಕ್ಷಕ ವೆಂಕಪ್ಪ ಗೌಡ ಆಲಾಜೆ ಉಪಸ್ಥಿತರಿದ್ದರು. ಬಾಲಕೃಷ್ಣ ಕೆ ಮತ್ತು ಶಶಿಕಲಾ ರವರುಗಳು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.

LEAVE A REPLY

Please enter your comment!
Please enter your name here