ಆಲಂಕಾರು: ಶ್ರೀ ದುರ್ಗಾಂಬಾ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಮೇ.10ರಂದು ರಾತ್ರಿ ಶರವೂರಿನಲ್ಲಿ 5ನೇ ಸೇವೆಯಾಗಿ ’ರಾವಣ ವಧೆ’ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಮುಮ್ಮೆಳದಲ್ಲಿ ಬಾಲಕೃಷ್ಣ ಕೇಪುಳು (ರಾವಣ 1), ಶಂಕರ್ ಬಲ್ಯ (ದೂತ), ನಾರಾಯಣ ಭಟ್ ಆಲಂಕಾರು ( ಮಂಡೋದರಿ), ರಾಮ್ ಪ್ರಸಾದ್ ಆಲಂಕಾರು (ಮಾತಲಿ), ರಾಘವೇಂದ್ರ ಭಟ್ ತೋಟಂತಿಲ (ರಾಮ), ದಿವಾಕರ ಆಚಾರ್ಯ ಹಳೆನೇರೆಂಕಿ (ರಾವಣ 2) ಸಹಕರಿಸಿದರು. ಸೇವಾರ್ಥಿಯಾಗಿ ಕುಸುಮಾಕರ ಆಚಾರ್ಯ ಹಾಗೂ ಮನೆಯವರು ಹಳೆನೇರೆಂಕಿ ಸಹಕರಿಸಿದರು. ಸಂಗಮದ ಸದಸ್ಯ ನಾರಾಯಣ ಭಟ್ ಆಲಂಕಾರು ಸ್ವಾಗತಿಸಿ, ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ವಂದಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಸೇವಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಸೇವಾಪ್ರಸಾದವನ್ನು ನೀಡಲಾಯಿತು.