ಮೇ.12ರಿಂದ15: ಆರೇಲ್ತಡಿ ದೈವಸ್ಥಾನದಲ್ಲಿ ಪ್ರತಿಷ್ಠೆ ,ಬ್ರಹ್ಮಕಲಶ,ನೇಮೋತ್ಸವ

0

ಮೇ.12 -ಹೊರೆ ಕಾಣಿಕೆ ಸಮರ್ಪಣೆ,ಮೇ.13 -ಧಾರ್ಮಿಕ ಸಭೆ ,ಶಿವಧೂತೆ ಗುಳಿಗೆ ನಾಟಕ 

ಸವಣೂರು: ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕ್ಲು, ಕೆಡೆಂಜೋಡಿತ್ತಾಯ  ದೈವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಟೆ ,ಬ್ರಹ್ಮಕಲಶ- ನೇಮೋತ್ಸವವು ಮೇ.12 ರಿಂದ ಮೇ.16ರವರೆಗೆ ಬ್ರಹ್ಮ ಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಮೇ.12ರಂದು ಬೆಳಿಗ್ಗೆ 9.30ಕ್ಕೆ ಹಸಿರುವಾಣಿ ಮೆರವಣಿಗೆಯು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ಸವಣೂರು ಪುದುಬೆಟ್ಟು ಬಸದಿಗೆ ಬಂದು ಬಳಿಕ ಆರೇಲ್ತಡಿ ದೈವಸ್ಥಾನಕ್ಕೆ ತಲುಪಲಿದೆ.ಬಳಿಕ ಅಲಂಕಾರ ನಡೆಯಲಿದೆ. ಸಂಜೆ 5ಕ್ಕೆ ತಂತ್ರಿಗಳ ಆಗಮನ,ರಾತ್ರಿ ಸಾಮೂಹಿಕ ಪ್ರಾರ್ಥನೆ,ಆಚಾರ್ಯ ವರಣ,ಪ್ರಾಸಾದ ಪರಿಗ್ರಹ,ಪುಣ್ಯಾಹ ಪ್ರಾಸಾದ ಶುದ್ದಿ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಬಲಿ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಮೇ.13ರಂದು ಬೆಳಿಗ್ಗೆ  ಗಣಪತಿ ಹವನ,ಭಗವತಿ ಪೂಜೆ,ಬಿಂಬ ಶುದ್ದಿ,ಕಲೆ ಶುದ್ದಿ,ಅನುಜ್ಞಾ ಕಲಶ,ಶಯ್ಯಾ ಪೂಜೆ,ಅನುಜ್ಞಾ ಪ್ರಾರ್ಥನೆ, ಜೀವೋದ್ವಾಸನೆ,ಶಯ್ಯೆಯಲ್ಲಿ  ಪೂಜೆ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಅಧಿವಾಸ ಪೂಜೆ, ಕಲಶ ಪೂಜೆ, ಭಗವತಿ ಸೇವೆ, ಜ್ಞಾನಾಧಿವಾಸ,ಅಧಿವಾಸ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಕುಲ ಕಲಾ ಕೇಂದ್ರ ಪುರುಷರಕಟ್ಟೆ ಪುತ್ತೂರು ಇವರಿಂದ ಗುರುಪ್ರಿಯಾ ಕಾಮತ್ ನಿರ್ದೇಶನದಲ್ಲಿ ಗಾನ ನೃತ್ಯ ಸಂಭ್ರಮ ನಡೆಯಲಿದೆ.

ರಾತ್ರಿ ಸಭಾ ಕಾರ್ಯಕ್ರಮ ನಡೆಯಲಿದ್ದು,ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ  ನೀಡುವರು.ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಹಿಸುವರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು.ಅತಿಥಿಗಳಾಗಿ ಪುತ್ತೂರು ಶಾಸಕ ಅಶೋಕ್ ರೈ,ವಿಧಾನ ಪರಿಷತ್ತು ಸದಸ್ಯರಾದ ಭಾರತಿ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು, ಪ್ರತಾಪ ಸಿಂಹ ನಾಯಕ್,ಮಾಜಿ ಸಚಿವ ಎಸ್.ಅಂಗಾರ,ಮಾಜಿ ಶಾಸಕ ಸಂಜೀವ ಮಠಂದೂರು ,ಸೀತಾರಾಮ ರೈ ಸವಣೂರು, ಡಾ.ರೇಣುಕಾಪ್ರಸಾದ್ ಕೆ.ವಿ.,ಶಶಿಕುಮಾರ್ ರೈ ಬಾಲ್ಯೊಟ್ಟು ಮೊದಲಾದವರು ಪಾಲ್ಗೊಳ್ಳುವರು.

ಬಳಿಕ ಕಲಾ ಸಂಗಮ ಕಲಾವಿದರಿಂದ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ.

ಮೇ.14ರಂದು ಬೆಳಿಗ್ಗೆ ಪ್ರಾಸಾದ ಶುದ್ದಿ,ಪೀಠ ಪ್ರತಿಷ್ಠೆ, ಬೆಳಿಗ್ಗೆ  6.30ರಿಂದ 7.03ರ ವೃಷಭ ಲಗ್ನದಲ್ಲಿ ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ,ಕಲಶಾಭಿಷೇಕ ,ತಂಬಿಲ,ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ದೈವಗಳ ಭಂಡಾರ ತೆಗೆಯಲಾಗುವುದು.

ಮೇ.15ರಂದು ಬೆಳಿಗ್ಗೆ ಉಳ್ಳಾಕುಲು ದೈವದ ನೇಮೋತ್ಸವ, ಶ್ರೀ ಕೆಡೆಂಜೊಡಿತ್ತಾಯ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ,ಸಂಜೆ  ಶ್ರೀ ಪಂಜುರ್ಲಿ ಹಾಗೂ ಇತರ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಮೇ.16ರಂದು ಸಂಜೆ 6ರಿಂದ ಮುಗೇರಿನಿಂದ ಗುಳಿಗ ಮಾರಿ ಹೊರಟು ಮಾಂತೂರಿನಲ್ಲಿ ಶಿರಾಡಿ ದೈವದ ನೇಮವಾಗಿ ಸರ್ವೆಯಲ್ಲಿ ಮಾರಿ ಬಿಡುವುದು ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಸುಮನಾ ಮುರಳಿ ಮನೋಹರ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಕಿನಾರ,ಅಧ್ಯಕ್ಷ ದಿನೇಶ್ ಮೆದು, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here