ಪುತ್ತೂರು:ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ನಿರ್ಮಾಣದ, ಕಲಾಸಾರ್ವಭೌಮ ಸುಧಾಕರ ಬನ್ನಂಜೆಯವರ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡು ಬರೆದು ನಿರ್ಮಿಸಿ, ನಿರ್ದೇಶಿಸಿರುವ ‘ಗಂಟ್ ಕಲ್ವೆರ್’ ತುಳು ಚಲನಚಿತ್ರ ಮೇ.23ರಂದು ತುಳುನಾಡಿನಾದ್ಯಂತ ತೆರೆಕಾಣಲಿದೆ.
ಬದುಕಿನಲ್ಲಿ ಗಂಟಿನ ನಂಟು ಅಪಾರವಾಗಿದೆ. ಹಲವು ರೂಪದಲ್ಲಿರುವ ಗಂಟು ಯಾವಾಗ, ಹೇಗೆ ಬಿಚ್ಚಿಕೊಳ್ಳತ್ತದೆ ಎಂಬುದನ್ನು ಗಂಟ್ ಕಲ್ವೆರ್ ಚಲನಚಿತ್ರದ ಮೂಲಕ ತೋರಿಸಲಾಗಿದೆ. ಹಾಸ್ಯವನ್ನು ವಿಡಂಭನಾತ್ಮಕವಾಗಿ ಚಿತ್ರಿಕರಿಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಲ್ಲಾ ಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಮುಂದೆ ಇತರ ಕಡೆಗಳಲ್ಲಿಯೂ ಬಿಡುಗಡೆಗೊಳ್ಳಲಿದೆ. 200 ಮಂದಿ ಕಲಾವಿದರು ಈ ಚಿತ್ರದಲ್ಲಿ ಪಾತ್ರವಹಿಸಿದ್ದು, ಪ್ರತಿ ಫ್ರೇಮ್‌ನಲ್ಲಿ 20-30 ಜನ ಕಾಣಿಸಿಕೊಳ್ಳಲಿದ್ದಾರೆ. ವಿ.ಮನೋಹರ್ ಸಂಗೀತ ನೀಡಿದ್ದಾರೆ. ಇದರ ಕಥೆಯೇ ವಿಶಿಷ್ಟವಾಗಿದೆ. ಈ ಚಿತ್ರದ ಟ್ರೇಲರ್‌ನ್ನು ದೇವದಾಸ್ ಕಾಪಿಕಾಡ್ ಹಾಗೂ ಹಾಡನ್ನು ವಿಜಯ ಕುಮಾರ್ ಕೋಡಿಯಾಲ್‌ಬೈಲ್ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ 3 ಫ್ರೀಮಿಯರ್ ಶೋ ಮಾಡಿದ್ದು, ಜನತೆಗ ಅಪೇಕ್ಷೇಯಂತೆ 5 ಫ್ರೀಮಿಯರ್ ಶೋ ಮಾಡಿದೆ. ಪ್ರಾರಂಭದಿಂದ ಕೊನೆಯ ತನಕ ಹಾಸ್ಯವಿದೆ. ಗುಣಮಟ್ಟದಲ್ಲಿ ಸ್ವಲ್ಪವೂ ರಾಜಿಮಾಡಿಕೊಂಡಿಲ್ಲ.
ತುಳು ಚಲನಚಿತ್ರದ ದಿಗ್ಗಜ ಕಲಾವಿದಾರಾದ ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಂದೀಪ್ ಶೆಟ್ಟಿ, ಉಮೇಶ್ ಮಿಜಾರು, ಸುಂದರ ರೈ ಮಂದಾರ, ರವಿ ಸುರತ್ಕಲ್ ಸೇರಿದಂತೆ ತುಳುನಾಡಿನ ಎಲ್ಲಾ ಹಾಸ್ಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕ ನಟನಾಗಿ ಪುತ್ತೂರಿನವರೇ ಆಗಿರುವ ಆರ್ಯನ್ ಶೆಟ್ಟಿ, ನಾಯಕಿಯಾಗಿ ಸ್ಮಿತಾ ಸುವರ್ಣ ಮಲ್ಪೆ ಅಭಿನಯಿಸಿದ್ದಾರೆ ಎಂದರು.
ಚಿತ್ರದ ನಾಯಕ ನಟ ಆರ್ಯನ್ ಶೆಟ್ಟಿ ಮಾತನಾಡಿ, 2014ರಲ್ಲಿ ನಾನು ಹೇಮಂತ ಅವಳು ಸೇವಂತಿ ಕನ್ನಡ ಚಿತ್ರದಲ್ಲಿ ನಟಿಸಿದ್ದು ಅದು ರಾಜ್ಯದಾದ್ಯಂತ ಬಿಡುಗಡೆಗೊಂಡಿದ್ದು ಉತ್ತಮ ಸಹಕಾರ ದೊರೆತಿದೆ. ಗಂಟ್ ಕಲ್ವೆರ್ ಚಿತ್ರವು ಸಂಪೂರ್ಣ ಹಾಸ್ಯಮಯ ಚಿತ್ರವಾಗಿದೆ. ಜೊತೆಗೆ ಫೈಟಿಂಗ್, ಆಕ್ಷನ್ ಇದೆ. ಉತ್ತಮ ಹಾಡು ಇದೆ. ಇಂದಿನ ಒತ್ತಡದ ಜೀವನದಲ್ಲಿ 2 ಗಂಟೆಯ ಸಮಯವನ್ನು ಪೂರ್ಣವಾಗಿ ಚಿತ್ರದಲ್ಲಿಯೇ ಕೇಂದ್ರಿಕರಿಸುವಂತಿದೆ. ತುಳು ಚಿತ್ರರಂಗದ ಎಲ್ಲಾ ಸಿನಿಮಾಗಳಲ್ಲಿರುವ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು, ಮುಂಬಯಿ, ದುಬೈಗಳಲ್ಲಿ ಬಿಡುಗಡೆಗೊಳ್ಳಲಿದೆ. 1994ರಲ್ಲಿ ಪುತ್ತೂರಿನಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಒಂದು ಸಿನಿಮಾ ಮಾಡಲಾಗುತ್ತಿದೆ. ಪುತ್ತೂರಿನ ಸ್ಥಳೀಯ ಚಿತ್ರಣವನ್ನು ಹೊಂದಿಕೊಂಡು ಎಂದು ಹೇಳಿದರು.
ಚೀಪ್ ಕೋ.ಆರ್ಡಿನೇಟರ್ ಸುಧಾಕರ ಕುದ್ರೋಳಿ, ಸಹಾಯಕ ಕೋ.ಆರ್ಡಿನೇಟರ್ ಸಂತೋಷ್ ಶೆಟ್ಟಿ, ನಟ ಪ್ರಶಾಂತ್, ಚಲನಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ತುಳು ರಾಜ್ಯ ಭಾಷೆಯಾಗಬೇಕು ಎಂದು ಬಹಳಷ್ಟು ಪ್ರಯತ್ನಗಳು ನಡೆಯುತ್ತಿದೆ. ತುಳುನಾಡಿನಲ್ಲಿ ಬಹಳಷ್ಟು ಉತ್ತಮ ಕಲಾವಿದರು ಇದ್ದು ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ನೀಡುವ ಜೊತೆಗೆ ಅವರಿಗೂ ಪ್ರಶಸ್ತಿ ನೀಡಬೇಕು. ಉತ್ತಮ ಸಂಗೀತಗಾರರು, ಎಡಿಟರ‍್ಸ್‌ಗಳಿದ್ದು ಚಲನ ಚಿತ್ರದ ಪ್ರತಿ ವಿಭಾಗದಲ್ಲಿಯೂ ಪ್ರಶಸ್ತಿ ನೀಡಿದಾಗ ತುಳು ಇಂಡಸ್ಟ್ರೀ ಬೆಳೆಯುವುದರೊಂದಿಗೆ ತುಳು ಭಾಷೆಯು ಬೆಳೆಯಲು ಸಹಕಾರಿಯಾಗಲಿದೆ. ಇದಕ್ಕಾಗಿ ಕಳೆದ 16 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ.
-ಸುಧಾಕರ ಬನ್ನಂಜೆ, ನಿರ್ಮಾಪಕರು