ಪುತ್ತೂರು: ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿರುವ ಯೋಗೀಶ್ ರವರು “Ethnobotanical studies on herbal remedies for musculoskeletal and neurological disorders in the Western Ghats region of Dakshina Kannada District” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪಶ್ಚಿಮ ಘಟ್ಟಗಳ ಪಾರಂಪರಿಕ ಔಷಧಿಯ ಸಸ್ಯಗಳ ಕುರಿತಾದ ಇವರ 5 ಸಂಶೋಧನಾ ಲೇಖನಗಳು ಯು.ಜಿ.ಸಿಯಿಂದ ಮಾನ್ಯತೆ ಪಡೆದಿರುವ ಜರ್ನಲ್‌ಗಳಲ್ಲಿ ಪ್ರಕಟಗೊಂಡಿದ್ದು, 4 ಲೇಖನಗಳನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಾನ್ಪರೆನ್ಸ್‌ಗಳಲ್ಲಿ ಮಂಡಿಸಿರುತ್ತಾರೆ. ಇವರು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ 2013ನೇ ಬ್ಯಾಚಿನ ಉಪನ್ಯಾಸಕರಾಗಿದ್ದು ಮೈಸೂರು ವಿಶ್ವವಿದ್ಯಾನಿಲಯದಿಂದ ಕೆ-ಸೆಟ್ ಅರ್ಹತೆಯನ್ನು ಗಳಿಸಿರುತ್ತಾರೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರೊ. ಕೃಷ್ಣಕುಮಾರ್ ಜಿ. ರವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದಾರೆ. ಇವರು ಪೆರ್ಲಂಪಾಡಿಯ ಆನಡ್ಕ ಗೋಪಾಲಕೃಷ್ಣ ನಾಯಕ್ ಹಾಗೂ ಪ್ರೇಮಲತಾ ದಂಪತಿ ಪುತ್ರ.