ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭಾರ ಕಾರ್ಯದರ್ಶಿ ಶಿವರಾಮ ಮೂಲ್ಯ ನಿಡ್ಪಳ್ಳಿ ಗ್ರಾಮ ಪಂಚಾಯತಿಗೆ ವರ್ಗಾವಣೆಗೊಂಡಿದ್ದು, ಅವರನ್ನು ಮೇ 22 ರಂದು ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು,ಪಿ.ಡಿ.ಓ ಸುನಿಲ್ ಎಚ್ .ಟಿ,ಸದಸ್ಯರಾದ ಹರೀಶ್ ರೈ ಜಾರತ್ತಾರು, ಲೋಕೇಶ್ ಚಾಕೋಟೆ, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಭಾರತಿ ವಸಂತ್ ಕೌಡಿಚ್ಚಾರು, ಸೌಮ್ಯ ಬಾಲಸುಬ್ರಹ್ಮಣ್ಯ ,ಉಷಾರೇಖಾ ರೈ ಕೊಳ್ಳಾಜೆ, ಜಯಂತಿ ಪಟ್ಟುಮೂಲೆ, ವಿನಯ್ ಮಾಡ್ನೂರು, ಮೋನಪ್ಪ ಪೂಜಾರಿ ಕೆರೆಮಾರು, ನಾರಾಯಣ ನಾಯ್ಕ ಚಾಕೋಟೆ,ಸಾವಿತ್ರಿ ಪೊನ್ನೆತ್ತಳ್ಕ, ಅನಿತಾ ಆಚಾರಿ ಮೂಲೆ, ಪುಷ್ಪಲತಾ ಮರತ್ತಮೂಲೆ, ವಿನುತಾ ಬಳ್ಳಿಕಾನ, ರೇಣುಕಾ ಸತೀಶ್ ಕರ್ಕೇರ ಮಡ್ಯಂಗಳ, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು