ಪ್ರಗತಿ ಸ್ಟಡಿ ಸೆಂಟರ್: ಜೂ.2ರಿಂದ ಎಸ್‌ ಎಸ್‌ ಎಲ್‌ ಸಿ ಮತ್ತು ಪಿಯುಸಿ ತರಗತಿಗಳು ಪ್ರಾರಂಭ

0

ಪುತ್ತೂರು: 2024-25ನೇ ಸಾಲಿನ ಹತ್ತನೇ ತರಗತಿಯಲ್ಲಿ ಶೇಕಡ 97, ಪಿಯುಸಿಯಲ್ಲಿ ಶೇಕಡ 98 ಫಲಿತಾಂಶವನ್ನು ದಾಖಲಿಸಿದ ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಕಲಿಕೆಯಲ್ಲಿ ಹಿಂದುಳಿದು ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆಯ ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಾ ಬಂದಿದೆ.

ʼಹೊಸ ಮಂದಹಾಸʼ ಎಂಬ ಶಿರೋನಾಮೆಯಲ್ಲಿ ಕಳೆದ 18 ವರ್ಷಗಳಿಂದ ಶಾಲಾ ಕಾಲೇಜು ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಎಸ್ಎಸ್ಎಲ್ ಸಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಫೇಲಾಗಿರುವ ವಿಷಯದಲ್ಲಿ ತೇರ್ಗಡೆ ಹೊಂದಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಉತ್ತಮ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ.

ಪಿಯುಸಿ ಮತ್ತು ಎಸ್ಎಸ್ಎಲ್ ಸಿ: ಮಾರ್ಚ್ 2026ಕ್ಕೆ 15 ಅಥವಾ 17 ವರ್ಷ ತುಂಬಿರುವ ವಿದ್ಯಾರ್ಥಿಗಳು ಹಾಗೂ ಪ್ರಥಮ ಪಿಯುಸಿ ಅನುತ್ತೀರ್ಣಗೊಂಡವರು ಖಾಸಗಿಯಾಗಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಖಾಸಗಿಯಾಗಿ ನೋಂದಾಯಿಸಿಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಮಾರ್ಚ್ 2026ಕ್ಕೆ 15 ವರ್ಷ ಭರ್ತಿಗೊಂಡಿರಬೇಕು. ಇಂತಹ ವಿದ್ಯಾರ್ಥಿಗಳಿಗೆ ಈಗಾಗಲೇ ದಾಖಲಾತಿ ಆರಂಭಗೊಂಡಿರುತ್ತದೆ.

DMEd Teachers Training: ಎಸ್ಎಸ್ಎಲ್ ಸಿ, ಪಿಯುಸಿ, ಡಿಗ್ರಿ ಆದ ವಿದ್ಯಾರ್ಥಿಗಳಿಗೆ DMEd Teachers Training ಕೋರ್ಸುಗಳಿಗೆ ದಾಖಲಾತಿ ಆರಂಭಗೊಂಡಿದ್ದು, 35 ವರ್ಷಕ್ಕಿಂತಲೂ ಹೆಚ್ಚು ಅನುಭವ ಹೊಂದಿದ ನುರಿತ ಶಿಕ್ಷಕಿಯರಿಂದ ತರಬೇತಿ ಸೇರಿದಂತೆ ಒಂದು ವರ್ಷದ ಉಚಿತ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್ ತರಗತಿಗಳು ನಡೆಯಲಿವೆ.

ಟ್ಯೂಷನ್ ತರಗತಿಗಳು: ಒಂದರಿಂದ ಪದವಿ ತರಗತಿಯವರೆಗೆ ಟ್ಯೂಷನ್ ತರಗತಿಗಳು, ನವೋದಯ ಪರೀಕ್ಷೆ ತಯಾರಿ, NTSE/ NMMS, ದಕ್ಷಿಣ ಕನ್ನಡದ ನುರಿತ ಉಪನ್ಯಾಸಕರಿಂದ ಸಿ.ಇ.ಟಿ./ನೀಟ್/ಜೆಇಇ ತರಗತಿಗಳು ಅಲ್ಲದೇ ವಿವಿಧ ಇಲಾಖೆಯಲ್ಲಿ ಜರಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುವುದು.

2025-26ನೇ ಸಾಲಿನ ಶೈಕ್ಷಣಿಕ ವರ್ಷದ ದೈನಂದಿನ ತರಗತಿಗಳು ಜೂನ್ 2ರಿಂದ ಪ್ರಾರಂಭಗೊಳ್ಳಲಿದ್ದು, ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳು ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಟೇಬಲ್ ಟ್ಯೂಷನ್ ತರಗತಿಯನ್ನು ನಡೆಸಲಾಗುವುದು.
ತರಗತಿಗಳು ಬೆಳಗ್ಗೆ 9:30 ರಿಂದ ಸಂಜೆ 4:30ರವರೆಗೆ ಹಾಗೂ ಭಾನುವಾರ ಬೆಳಗ್ಗೆ 9:30ರಿಂದ ಸಂಜೆ 3:00 ಗಂಟೆಯವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು/ಪೋಷಕರು ಸಂಸ್ಥೆಯ ಪ್ರಾಂಶುಪಾಲರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು.
ಹೆಚ್ಚಿನ ವಿವರಗಳಿಗೆ 9900109490, 9480106274, 8123899490 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲೆ ಕೆ ಹೇಮಲತಾ ಗೋಕುಲ್ ನಾಥ್ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here