ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ವಿಟ್ಲ ಯೋಜನಾ ಕಚೇರಿಯಲ್ಲಿ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಮತ್ತು ನವಜೀವನ ಸಮಿತಿ ಪೋಷಕರ ಸಭೆ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿಯವರು ಮತು ತಾಲೂಕಿನ ಯೋಜನಾಧಿಕಾರಿಯವರ ಉಪಸ್ಥಿತಿಯಲ್ಲಿ ಮೇ.27ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಳ್ ವಹಿಸಿದ್ದರು.
ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಯವರಾದ ಗಣೇಶ್ ಆಚಾರ್ಯರವರು 2025-2026ನೇ ಸಾಲಿನಲ್ಲಿ ತಾಲೂಕಿನಲ್ಲಿ ನಡೆಯುವ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಮದ್ಯವರ್ಜನಾ ಶಿಬಿರ, ವಿಶ್ವ ತಂಬಾಕು ರಹಿತ ದಿನಾಚರಣೆ, ಮಾದಕ ವಸ್ತು ವಿರೋಧಿ ದಿನಾಚರಣೆ, ನವಜೀವನೋತ್ಸವ ಕಾರ್ಯಕ್ರಮ, ಸ್ವಾಸ್ಯ ಸಂಕಲ್ಪ ಕಾರ್ಯಕ್ರಮ ನಡೆಯಲಿದೆ. ಮಂಚಿ ವಲಯದಲ್ಲಿ ಮದ್ಯವರ್ಜನಾ ಶಿಬಿರ ನಡೆಯಲಿದ್ದು ನವಜೀವನ ಸಮಿತಿ ಬಲಪಡಿಸುವಂತೆ ತಿಳಿಸಿ ಶಿಬಿರಾರ್ಥಿಗಳನ್ನು ಶಿಬಿರಕ್ಕೆ ಸೇರ್ಪಡೆ ಮಾಡುವಲ್ಲಿ ಅವರ ಪಾತ್ರ ಬಹಮುಖ್ಯವಾಗಿರುತ್ತದೆ ಎಂದರು.
ಸಭೆಯಲ್ಲಿ ಅಳಿಕೆ ವಲಯದ ಜನಜಾಗೃತಿ ವೇದಿಕೆಯ ಅಧ್ಯಕರಾದ ಬಾಲಕೃಷ್ಣ ಕಾರಂತ, ಪೆರ್ನೆ ವಲಯದ ಜನಜಾಗೃತಿ ವೇದಿಕೆಯ ಅಧ್ಯಕರಾದ ರೋಹಿತಾಕ್ಷ, ಮಾಣಿ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಕೇಪು ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲಡ್ಕ, ಕಲಡ್ಕ ವಲಯದ ಜನಜಾಗೃತಿ ವೇದಿಕೆಯ ಅಧ್ಯಕರಾದ ಬಟ್ಯಪ್ಪ ಶೆಟ್ಟಿ, ತಾಲೂಕಿನ ಜನಜಾಗೃತಿ ವೇದಿಕೆಯ ಸದಸ್ಯರಾದ ನಟೇಶ್ ವಿಟ್ಲ ಹಾಗೂ ತಾಲೂಕಿನ ನವಜೀವನ ಸಮಿತಿ ಪೋಷಕರು ಉಪಸ್ಥಿತರಿದರು. ತಾಲೂಕಿನ ಯೋಜನಾಧಿಕಾರಿ ಸುರೇಶ್ ಗೌಡ .ಎಸ್.ಪ್ರಾ.ಸಾವಿಕ ಮಾತನಾಡಿದರು.