ಪುತ್ತೂರು: ಕೊರಿಂಗಿಲ ಜುಮಾ ಮಸೀದಿಯ ಜಮಾಅತ್ ಕಮಿಟಿಯ ಮಹಾಸಭೆ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಮಾಅತ್‌ನ ಕಳೆದ ಒಂದು ವರ್ಷದ ಲೆಕ್ಕಪತ್ರ ಹಾಗೂ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫಿನ ಲೆಕ್ಕಪತ್ರವನ್ನು ಮಂಡಿಸಲಾಯಿತು.
ಜಮಾಅತ್ ಕಮಿಟಿಯನ್ನು ಈ ಹಿಂದಿಂನಂತೆ ಮುಂದುವರಿಸಲು ತೀರ್ಮಾನಿಸಲಾಯಿತು.
ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೂಸಕುಂಞಿ ಬೆಟ್ಟಂಪಾಡಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಆಲಿಕುಂಞಿ ಹಾಜಿ ಕೊರಿಂಗಿಲ, ಕೋಶಾಧಿಕಾರಿಯಾಗಿ ಮಹಮ್ಮದ್ ಹಾಜಿ ಶಾಲಾಬಳಿ, ಲೆಕ್ಕಪರಿಶೋಧಕರಾಗಿ ಶಾಹುಲ್ ಹಮೀದ್ ಕೊರಿಂಗಿಲ, ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಕುಕ್ಕುಪುಣಿ ಹಾಗೂ ಮುಹಮ್ಮದ್ ಅಂಕತ್ತಲ ಮತ್ತು 20 ಮಂದಿಯನ್ನು ಒಳಗೊಂಡ ಕಮಿಟಿಯನ್ನು ರಚಿಸಲಾಯಿತು. ಖತೀಬ್ ಅಯ್ಯುಬ್ ವಹಬಿ ದುವಾ ನೆರವೇರಿಸಿದರು. ಮೂಸಕುಂಞಿ ಬೆಟ್ಟಂಪಾಡಿ ಸ್ವಾಗತಿಸಿದರು. ಅಶ್ರಫ್ ಕುಕ್ಕುಪುಣಿ ವಂದಿಸಿದರು.