ಪುತ್ತೂರು: ಜನ ಸಂಘದ ಹಿರಿಯ ಕಾರ್ಯಕರ್ತ, ಕೆದಂಬಾಡಿ ಗ್ರಾಮದ ಪ್ರತಿಷ್ಠಿತ ಇದ್ಯಪೆ ಮನೆತನದ ಹಿರಿಯರಾದ ನಾರಾಯಣ ಗೌಡ (86ವ)ರವರು ಮೇ.27ರಂದು ನಿಧನರಾದರು.
ಮೃತರು ಪತ್ನಿ ಹೊನ್ನಮ್ಮ, ಪುತ್ರರಾದ ಕೆದಂಬಾಡಿ ಗ್ರಾಪಂ ಸದಸ್ಯ, ಕೆದಂಬಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ ಕುಮಾರ್ ಇದ್ಯಪೆ, ಸೊಸೆ ವಾಣಿಶ್ರೀ, ಮೊಮ್ಮಕ್ಕಳಾದ ವಿಭಾ, ಭವಿತಾ, ಜಸ್ಮಿತ ಹಾಗೂ ಅಪಾರ ಬಂಧು ಬಳಗ, ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಮಂಡಲ ಮಾಜಿ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ನೆ.ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ನಾರಾಯಣ ಪೂಜಾರಿ ಕುರಿಕ್ಕಾರ, ಕೆದಂಬಾಡಿ ಶಕ್ತಿಕೇಂದ್ರದ ಅಧ್ಯಕ್ಷ ಶರತ್ ಗುತ್ತು, ತಾಲೂಕು ಗೌಡ ಸಂಘದ ಗೌರವ ಅಧ್ಯಕ್ಷ ಚಿದಾನಂದ ಗೌಡ ಬೈಲಾಡಿ, ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆ, ಕೆದಂಬಾಡಿ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಸೇರಿದಂತೆ ಅನೇಕ ಮಂದಿ ಗಣ್ಯರು, ರಾಜಕೀಯ, ಧಾರ್ಮಿಕ ಮುಖಂಡರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು