ನಾಳೆ(ಮೇ.30): ಸ್ಕೂಲ್ ಲೀಡರ್ ತೆರೆಗೆ

0

ಪುತ್ತೂರು: ಸನ್ ಮ್ಯಾಟ್ರಿಕ್ಸ್ ಬ್ಯಾನರ್‌ನಡಿ ತಯಾರಾಗಿರುವ ಕೆ. ಸತ್ಯೇಂದ್ರ ಪೈ ನಿರ್ಮಾಣದ ‘ಸ್ಕೂಲ್ ಲೀಡರ್’ ಕನ್ನಡ ಚಲನಚಿತ್ರವು ಮೇ.30ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ರಜಾಕ್ ಪುತ್ತೂರು ತಿಳಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ‘ಸ್ಕೂಲ್ ಲೀಡರ್ ಸಿನಿಮಾವು ಪ್ರೌಢಶಾಲಾ ಮಕ್ಕಳ ಮನೋ ವಿಕಾಸ, ಶೈಕ್ಷಣಿಕ ಬದುಕು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣ ಮೈಗೂಡಿಸಿಕೊಳ್ಳುವ ಕಥಾವಸ್ತು ಹೊಂದಿದೆ. ಶಾಲಾ ಚುನಾವಣೆ ಆಧರಿಸಿರುವ ಕಥೆ ಮತ್ತು ಶಿಕ್ಷಕರ ಕೊರತೆಯನ್ನು ನೀಗಿಸುವ ನಿಟ್ಟಿನ ಕಥೆ ಆಗಿರುವುದರಿಂದ ಇಡೀ ಸಿನಿಮಾವನ್ನು ಉಡುಪಿಯ ಕಟಪಾಡಿಯ ಒಂದೇ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು 25 ಶಾಲೆಗಳ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ’ ಎಂದರು.

ಚಿತ್ರದಲ್ಲಿ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ದೀಪಕ್ ರೈ ಪಾಣಾಜೆ, ರಮೇಶ್ ಭಟ್ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಟನೆ ಮಾಡಿರುವ ನಟ ಮತ್ತು ಸಹನಿದೇಶಕರಾಗಿರುವ ಸುದರ್ಶನ್ ಶಂಕರ್ ಹೇಳಿದರು. ಚಿತ್ರವನ್ನು ಶಾಲಾ ಮಕ್ಕಳು ಕೂಡಾ ವೀಕ್ಷಣೆ ಮಾಡುವಂತೆ ನಾಯಕ ನಟಿ ದೀಕ್ಷಾ ಡಿ ರೈ ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ, ಸಹ ನಿರ್ದೇಶಕ ಅಕ್ಷತ್ ವಿಟ್ಲ ಉಪಸ್ಥಿತರಿದ್ದರು.

‘ಪೆನ್ಸಿಲ್ ಬಾಕ್ಸ್’ ಚಿತ್ರದ ಗೀತೆ ರಚನೆಗೆ ಅತ್ಯುತ್ತಮ ಗೀತೆ ರಚನೆಕಾರ ಪ್ರಶಸ್ತಿ ಪಡೆದಿರುವ ರಜಾಕ್ ಚಿತ್ರಕಥೆ, ಸಂಭಾಷಣೆ, ಹಾಡು ಬರೆದಿದ್ದಾರೆ. ಪೆನ್ಸಿಲ್ ಬಾಕ್ಸ್ ಚಿತ್ರದ ಗೀತೆ ರಚನೆಗಾಗಿ ರಝಾಕ್ ಪುತ್ತೂರು ಇವರು 2019ನೇ ಸಾಲಿನ ಅತ್ಯುತ್ತಮ ಚಿತ್ರ ಸಾಹಿತಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

LEAVE A REPLY

Please enter your comment!
Please enter your name here