ಮೇ 31(ಇಂದು):ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಟೆಂಡರ್ ಸುಧಾಕರ್ ಕೆ ಸೇವಾ ನಿವೃತ್ತಿ

0

ಪುತ್ತೂರು: ಸರಕಾರಿ ವೃತ್ತಿಯಲ್ಲಿ ಸುಮಾರು 27 ವರ್ಷ ಕಾರ್ಯ ನಿರ್ವಹಿಸುತ್ತಿದ್ದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಟೆಂಡರ್ ಸುಧಾಕರ್ ಕೆ.ರವರು ಮೇ 31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

1998, ಡಿಸೆಂಬರ್ 15ರಂದು ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯಕ್ಕೆ ಸೇರಿದ ಸುಧಾಕರ್ ರವರು 2006ರಲ್ಲಿ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ಮುಂದುವರೆಸಿ 2017ರಲ್ಲಿ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ವರ್ಗಾವಣೆಗೊಂಡು ಆಗಮಿಸಿದ್ದರು. ಪುತ್ತೂರಿನಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ತನ್ನ ಸೇವೆಯಿಂದ ನಿವೃತ್ತಿಗೊಂಡು ಬುಳೇರಿಕಟ್ಟೆ ಕೆಳಗಿನಮನೆ ಎಂಬಲ್ಲಿ‌ ಪತ್ನಿ‌ ಹಾಗೂ ಈರ್ವರು ಪುತ್ರರೊಂದಿಗೆ ವಾಸ್ತವ್ಯ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here