ಪೆರಾಬೆ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಕಾಂಪೌಂಡ್ ಕುಸಿದು ಪಕ್ಕದ ಕಾಂಪ್ಲೆಕ್ಸ್ ಮೇಲೆ ಬಿದ್ದ ಘಟನೆ ಕುಂತೂರಿನಲ್ಲಿ ನಡೆದಿದೆ.
ಕಡಬ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ರಸ್ತೆ ಬದಿಯಲ್ಲಿರುವ ಕುಶಾಲಪ್ಪ ಗೌಡ ಎಂಬವರ ಮನೆಯ ಒಂದು ಬದಿಯ ಸುಮಾರು 10 ಅಡಿ ಎತ್ತರದ ಆವರಣ ಗೋಡೆ ಕುಸಿದು ಪಕ್ಕದ ಚಂದ್ರಶೇಖರ ರೈ ಅವರ ಮಾಲೀಕತ್ವದ ಸೋನಿಕ್ ಕಾಂಪ್ಲೆಕ್ಸ್ ನ ಗೋಡೆ ಮೇಲೆ ಬಿದ್ದಿದೆ. ಕಾಂಪ್ಲೆಕ್ಸ್ ನಲ್ಲಿ ಅಂಗಡಿ ಹಾಗೂ ಮನೆಗಳಿದ್ದು ಅದರ ಗೋಡೆಗೂ ಹಾನಿಯಾಗಿದೆ ಎಂದು ವರದಿಯಾಗಿದೆ.