ಪುತ್ತೂರು ಪ್ರಧಾನ ವ್ಯವಹಾರಿಕಾ ನ್ಯಾಯಾಲಯದ ಹಿರಿಯ ಶಿರಸ್ತೆದಾರ್ ಜಯಶ್ರೀ ಪಿ. ಸೇವಾ ನಿವೃತ್ತಿ

0

ಪುತ್ತೂರು: ಪುತ್ತೂರು ಪ್ರಧಾನ ವ್ಯವಹಾರಿಕಾ ನ್ಯಾಯಾಲಯದಲ್ಲಿ ಹಿರಿಯ ಶಿರಸ್ತೆದಾರರಾಗಿ ಕರ್ತವ್ಯ ರ್ನಿಹಿಸುತ್ತಿದ್ದ ಜಯಶ್ರೀ ಪಿ. ಮೇ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದರು.
1988ರಲ್ಲಿ ಪುತ್ತೂರು ಪ್ರಧಾನ ಸಿವಿಲ್ ಜಡ್ಜ್ ಕೋರ್ಟ್‌ನಲ್ಲಿ ಕರ್ತವ್ಯಕ್ಕೆ ಸೇರಿದ ಇವರು 7 ವರ್ಷ ಸೇವೆ ಸಲ್ಲಿಸಿ ಬಳಿಕ ಸುಳ್ಯದಲ್ಲಿ 2 ವರ್ಷ, ಪುತ್ತೂರಿನಲ್ಲಿ 7 ವರ್ಷ, ಬೆಳ್ತಂಗಡಿಯಲ್ಲಿ 2 ವರ್ಷ ಬಳಿಕ ಪುತ್ತೂರಿಗೆ ವರ್ಗಾವಣೆಗೊಂಡು ಒಟ್ಟು 37 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿದ್ದಾರೆ.

ಬೊಳುವಾರು ಮಲರಾಯ ದೇಸ್ಥಾನದ ಬಳಿಯ ನಿವಾಸಿಯಾದ ದಿ. ಎನ್. ಮೋಹನ್‌ದಾಸ್ ನಾಯ್ಕ್‌ರವರ ಪತ್ನಿಯಾದ ಇವರು ತಾಯಿ ವಸಂತಿ, ಪುತ್ರಿ ದೀಪ್ತಿ, ಅಳಿಯ ವೆಂಕಟೇಶ್, ಮೊಮ್ಮಕ್ಕಳಾದ ಆದ್ಯ, ಅದ್ವಿತ್ ಹಾಗೂ ಸಹೋದರ, ಸಹೋದರಿಯರೊಂದಿಗೆ ವಾಸವಾಗಿದ್ದಾರೆ.

ಬೀಳ್ಕೊಡುಗೆ ಸನ್ಮಾನ:
ನಿವೃತ್ತಿಗೊಂಡ ಜಯಶ್ರೀ ಪಿ.ರವರನ್ನು ನ್ಯಾಯಾಲಯದ ಸಿಬಂದಿಗಳ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here