





ಪುತ್ತೂರು: ಪುತ್ತೂರು ಪಿಎಲ್ ಡಿ ಬ್ಯಾಂಕ್ ಇದರ ನೂತನ ವ್ಯವಸ್ಥಾಪಕರಾಗಿ ಸುಮನ ರವರು ಜೂ.2ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಸುಮನ ಅವರು 1995ರಲ್ಲಿ ಸುಳ್ಯದಲ್ಲಿ ಪಿಎಲ್ ಡಿ ಬ್ಯಾಂಕಿಗೆ ಉದ್ಯೋಗಿಯಾಗಿ ಸೇರ್ಪಡೆಗೊಂಡಿದ್ದರು. ಬಳಿಕ 2006ರಲ್ಲಿ ಪುತ್ತೂರು ಪಿಎಲ್ ಡಿ ಬ್ಯಾಂಕ್ ಗೆ ವರ್ಗಾವಣೆಗೊಂಡಿದ್ದರು. ಇವರು ಪತಿ ಬಾಲಕೃಷ್ಣ ಮಂಗಳೂರು ಬಲ್ಮಠ ಜೂನಿಯರ್ ಕಾಲೇಜ್ ನಲ್ಲಿ ಉಪನ್ಯಾಸಕರಾಗಿದ್ದು, ಪುತ್ರಿ ಸಾನ್ವಿ ಅವರೊಂದಿಗೆ ಪುತ್ತೂರು ಬಪ್ಪಳಿಗೆಯಲ್ಲಿ ವಾಸವಾಗಿದ್ದಾರೆ.












