





ಪುತ್ತೂರು: ದಿನದಿಂದ ದಿನಕ್ಕೆ ಆನೆಯ ಉಪಟಳ ಹೆಚ್ಚಾಗಿದ್ದು,ಜೂ.1ರಂದು ಪೆರ್ನಾಜೆಗೆ ಲಗ್ಗೆಯಿಟ್ಟು ಬೆಳೆ ನಾಶಮಾಡಿವೆ ಎಂದು ವರದಿಯಾಗಿದೆ.



ರಾತ್ರಿ ಕುಮಾರ್ ಪೆರ್ನಾಜೆ ಎಂಬವರ ತೋಟಕ್ಕೆ ಆನೆ ನುಗ್ಗಿ ಸುಮಾರು 10ಕ್ಕೂ ಮಿಕ್ಕಿ ಬಾಳೆ, ದಿವಿ ಹಲಸು, ಅಡಿಕೆ ಸಸಿಗಳನ್ನು ನಾಶಪಡಿಸಿವೆ. ಬಳಿಕ ಕೆರೆಯಲ್ಲಿ ಈಜಾಡಿ ಅಂಕೋತಿಮಾರು ಅಥವಾ ನೂಜಿಬಾಳ್ತಿಲದ ಕಡೆಗೆ ತೆರಳಿರಬಹುದೆನ್ನಲಾಗಿದೆ.
















