ಪುತ್ತೂರು: ದರ್ಬೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ಜೂ.2ರಂದು ವಿಜೃಂಭಣೆಯಿಂದ ಜರುಗಿತು.

ಪ್ರಾರಂಭದಲ್ಲಿ ವಿದ್ಯಾರ್ಥಿಗಳನ್ನು ಹಾಗೂ ನೂತನ ಮುಖ್ಯೋಪಾಧ್ಯಾಯಿನಿಯಾಗಿ ಆಗಮಿಸಿದ ಭಗಿನಿ ಅನಿತಾ ಟ್ರೆಸ್ಸಿ, ಭಗಿನಿಯರಾದ ಸಿಸ್ಟರ್ ಮೋನಿಕಾ, ಸಿಸ್ಟರ್ ಸುಜಾತ , ಸಿಸ್ಟರ್ ರ್ರೀನಾ ಮತ್ತು ಶಿಕ್ಷಕಿಯರು, ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ರವರನ್ನು ವಾದ್ಯ ಮೇಳಗಳೊಂದಿಗೆ ಶಾಲೆಗೆ ಸ್ವಾಗತಿಸಲಾಯಿತು. ನಂತರ ದೀಪ ಪ್ರಜ್ವಲನೆಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನಾ ನೃತ್ಯ ಮತ್ತು ಸ್ವಾಗತ ನೃತ್ಯವು ಪ್ರದರ್ಶಿಸಲ್ಪಟ್ಟಿತು. ನೂತನ ಮುಖ್ಯೋಪಾಧ್ಯಾಯನಿಯಾಗಿ ಅಧಿಕಾರ ಸ್ವೀಕರಿಸಿದ ಸಿಸ್ಟರ್ ಅನಿತಾ ರವರು ಮಕ್ಕಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್. ಮಾತನಾಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಪ್ರಗತಿಗೆ ಮುನ್ನುಗ್ಗಲು ಹುರಿದುಂಬಿಸಿದರು.
ಸಹ ಶಿಕ್ಷಕರಾದ ಭಗಿನಿ ಸುನಿತಾ ರವರು ಸ್ವಾಗತಿಸಿ, ವೀಣಾ ರವರು ವಂದಿಸಿ, ಜೆನಿಫರ್ ನಿರೂಪಿಸಿದರು.