ಪುತ್ತೂರು: ಪ್ರತಿ ನಿತ್ಯ ಮೊಬೈಲ್ ನಲ್ಲಿ ಬರುವ ಟೆಕ್ಸ್ಟ್ ಮೆಸೇಜ್‌ಗಳಿಗೇನೂ ಬರವಿಲ್ಲ ಇಂತಹ ಮೆಸೇಜ್‌ಗಳು ನಮ್ಮನ್ನು ಸಂಕಷ್ಟಕ್ಕೆ ಸಿಳುಕಿಸುವುದಲ್ಲದೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಹಾಗೆಂದ ಮಾತ್ರಕ್ಕೆ ಮೊಬೈಲ್ ನಲ್ಲಿ ಬರುವ ಎಲ್ಲಾ ಟೆಕ್ಸ್ಟ್ ಮೆಸೇಜ್‌ಗಳು ನಕಲಿ ಎಂದರ್ಥವಲ್ಲ. ಅದೇನಿದ್ದರೂ ಜನ ಸಾಮಾನ್ಯನಿಗೆ ಗೊಂದಲ ಮಾತ್ರ ಇದ್ದೇ ಇರುತ್ತದೆ. ಯಾವ ಮೆಸೇಜ್ ಅನ್ನು ನಂಬಬಹುದು ಯಾವುದನ್ನು ನಂಬಬಾರದು ಎನ್ನುವ ಜನಸಾಮಾನ್ಯನ ಗೊಂದಲ ನಿವಾರಣೆಗಾಗಿ ಕೇಂದ್ರ ಸರಕಾರ ಉಪಾಯವೊಂದನ್ನು ಕಂಡು ಹಿಡಿದಿದೆ. ಇದು ನಿಮ್ಮನ್ನು ಸ್ಕ್ಯಾಮರ್ ಗಳಿಂದ ರಕ್ಷಿಸಲಿದೆ.
ನೀವು ಸ್ವೀಕರಿಸುವ ಮೆಸೇಜ್‌ನಲ್ಲಿ G ಎಂದು ಬರೆದಿದ್ದರೆ ಇದು ಮಾಹಿತಿ ನೀಡುವ ಸಲುವಾಗಿ ಸರಕಾರದ ಕಡೆಯಿಂದ ಬಂದ ಮೆಸೇಜ್ ಎಂದರ್ಥ. ಇನ್ನು S ಎಂದು ಬರೆದಿದ್ದರೆ (ಸೇವಾ)ಸರ್ವೀಸ್ ಸಂಬಂಧಿತ ಮೆಸೇಜ್ ಎಂದರ್ಥ. T ಎಂದು ಬರೆದಿದ್ದರೆ ಡೆಬಿಟ್, ಕ್ರೆಡಿಟ್ ಸೇರಿದಂತೆ ಬ್ಯಾಂಕ್ ವ್ಯವಹಾರ ಸಂಬಂಧಿತ ಮೆಸೇಜ್ ಎಂದರ್ಥ.ಇನ್ನು ಇದರ ಹೊರತಾಗಿ P ಎಂದು ಬರೆದಿದ್ದರೆ ಇದು ಪ್ರೊಮೋಷನಲ್( ಪ್ರಚಾರ)ಮೆಸೇಜ್ ಎಂದರ್ಥ. ಇನ್ನು ಏನೂ ಬರೆದಿಲ್ಲ ಎಂದರೆ ಇದು ಸ್ಕ್ಯಾಮರ್ ಗಳು ಕಳುಹಿಸಿದ ಸಂದೇಶವಾಗಿರಬಹುದು, ಕಾರಣ ಸ್ಕ್ಯಾಮರ್ ಗಳಿಗೆ GSTP ಎಂದು ಬರೆಯಲು ಸಾಧ್ಯವೇ ಇಲ್ಲ ಇದು ಟ್ರಾಯಿನ DLT ಅಂದರೆ ಡಿಸ್ರ್ಟಿಬ್ಯೂಟೆಡ್ ಲೇಸರ್ ಟೆಕ್ನಾಲಜಿ ಫ್ಲ್ಯಾಟ್ ಫಾರಂನಲ್ಲಿ ನೊಂದಾಯಿಸ್ಪಟ್ಟಿರುವುದರಿಂದ ಸ್ಕ್ಯಾಮರ್‌ಗಳಿಗೆ ಇದು ಲಭ್ಯವಾಗುವುದಿಲ್ಲ. ಮೆಸೇಜ್ ನೋಡಿ ಯಾಮಾರುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ.