ಸನ್ಮಾನ, ಪ್ರತಿಭಾ ಪುರಸ್ಕಾರ, ಸಹಾಯಧನ, ಉಚಿತ ಪುಸ್ತಕ ವಿತರಣೆ
ಪುತ್ತೂರು: ಅರಿಯಡ್ಕ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಗ್ರಾಮ ಸಮಿತಿಯ ಅಧ್ಯಕ್ಷರಾದ ಭರತ್ ಪೂಜಾರಿ ಓಲ್ತಾಜೆಯವರ ಸಭಾಧ್ಯಕ್ಷತೆಯಲ್ಲಿ ಜೂ. 8ರಂದು ಮಜ್ಜಾರಡ್ಕ ಸಭಾಭವನದಲ್ಲಿ ನಡೆಯಿತು.

ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪುತ್ತೂರು ಯವವಾಹಿನಿ ಅಧ್ಯಕ್ಷರಾದ ಅಣ್ಣಿ ಪೂಜಾರಿ, ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಮಹೇಶ್ಚಂದ್ರ ಸಾಲಿಯಾನ್, ಮುಖ್ಯಕಾರ್ಯನಿರ್ವಾಹನಾಧಿಕಾರಿ ಉದಯ ಕೋಲಾಡಿ, ಅರಿಯಡ್ಕ ಮಹಿಳಾ ವೇದಿಕೆ ಅಧ್ಯಕ್ಷೆ ಶಮ್ಮಿಲತಾ ಪುರುಷೋತ್ತಮ ಗೋಳ್ತಿಲ,ಸುರೇಶ್ ಪೂಜಾರಿ ಸುಶಾ ಕುಂಬ್ರ, ಕೋಚಣ್ಣ ಪೂಜಾರಿ ಎಂಡೆಸಾಗು ಉಪಸ್ಥಿತರಿದ್ದರು. ಯಶೋದಾ ಮಜ್ಜಾರ್ ವರಧಿ ವಾಚಿಸಿದರು. ರಮೇಶ್ ದರ್ಬೆತ್ತಡ್ಕ ಸ್ವಾಗತಿಸಿದರು. ವಿಖ್ಯಾತ್ ಮಜ್ಜರ್ ಪ್ರಾರ್ಥಿಸಿದರು. ಸಾನ್ವಿ ದರ್ಬೆತಡ್ಕ ಕಾರ್ಯಕ್ರಮನಿರೂಪಿಸಿದರು. ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಜಗದೀಶ್ ಅವರ ತಾಯಿ ಸುಶೀಲಾ ಪಯಾಂದೂರು ಅವರಿಗೆ ತಮ್ಮ ಮಗನ ಮುಂದಿನ ಶಿಕ್ಷಣಕ್ಕಾಗಿ ಸಹಾಯಧನದ ಸ್ಥಿರ ಠೇವಣಿ ಚೆಕ್ ಹಸ್ತಾಂತರಿಸಲಾಯಿತು.
ಪದಾಧಿಕಾರಿಗಳಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ
ಸಂಘದಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲಿಸಿದ ಶೇಷಮ್ಮವಾಸು ಪೂಜಾರಿ ಗುಂಡ್ಯಡ್ಕ, ಚಂದಪ್ಪ ಪೂಜಾರಿ ಮಜ್ಜಾರಡ್ಕ ,ಶಾಂತಾರಾಮ ಗೋಳ್ತಿಲ, ರಮೇಶ ಪೂಜಾರಿ ದರ್ಬೆತ್ತಡ್ಕ, ಚಂದ್ರಶೇಖರ ಕುತ್ಯಾಡಿ, ನಾರಾಯಣ ಪೂಜಾರಿ ಗೋಳ್ತಿಲ, ಜನಾರ್ದನ ಬಳ್ಳಿಕಾನ, ರವೀಂದ್ರ ಕೊರಿಕ್ಕಾರ, ಲೋಕನಾಥ ಮಜ್ಜರ್, ಚಿದಾನಂದ ಕುರಿಂಜ, ಕುಸುಮಾವತಿ ಮಜ್ಜಾರಡ್ಕ, ಸೌಮ್ಯಾ ಬಳ್ಳಿಕಾನ ಹರಿಣಾಕ್ಷಿ ಸ್ವಾಮಿ ನಗರ, ಶ್ರೀಕೃಪಾ ಮಜ್ಜರಡ್ಕ, ಸುಜಾತಾ ಶುಂಠಿಮಜಲು, ಲೋಕಾವತಿ ಕೊಂಬರಡ್ಕ, ಸೌಮ್ಯ ಮಜ್ಜರ್ , ಶ್ರೀಲತಾ ಶೇಕಮಲೆ,ಉಮಾವತಿ ಕೊಂಡಡ್ಕ, ಶಶಿಕಲಾ ಮಜ್ಜರ್, ಯಶೋಧ ಮಜ್ಜರ್, ಜಯಶ್ರೀ ಕೊಂಬರಡ್ಕ ಅವರನ್ನು ಅಭಿನಂದನೆ ಮಾಡಲಾಯಿತು.
ಭಾರತೀಯ ಸೇನೆಗೆ ಆಯ್ಕೆಯಾದ ವಿಜೇತ್ ಮಜ್ಜಾರ್ ಅವರನ್ನು ಸನ್ಮಾನಿಸಲಾಯಿತು. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಪ್ರಣ್ಯ, ವಿಖ್ಯಾತ್, ಅಸ್ಮಿತಾರವರುಗಳಿಗೂ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಅಭಿನಂದಿಸಲಾಯಿತು. ಸುಮಾರು 45 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು. ಜನಾರ್ದನ ಮಜ್ಜಾರು, ಭುವನ್ ಮಜ್ಜಾರು, ರಮ್ಯ ಮಜ್ಜಾರ್, ಯಶಸ್ವಿನಿ, ವೇದಾವತಿ ಮಜ್ಜಾರ್, ಶ್ರೀಲತಾ , ಜಯರಾಮ, ಚಂದ್ರಾವತಿ, ಪದ್ಮನಾಭ,ರಾಜೇಶ್ ಶೇಕಮಾಲೆ, ರಘುನಾಥ ಗೋಳ್ತಿಲ, ಸುಕುಮಾರ ಮಡ್ಯಂಗಳ ಮತ್ತಿತ್ತರು ಸಹಕರಿಸಿದ್ದರು.
