ಪಾಪೆಮಜಲು: ಸ.ಹಿ.ಪ್ರಾ.ಶಾಲೆಯಲ್ಲಿ ಎಲ್.ಕೆ.ಜಿ,ಯು.ಕೆ.ಜಿ ತರಗತಿಗಳ ಪ್ರಾರಂಭೋತ್ಸವ

0

ಅರಿಯಡ್ಕ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇಲ್ಲಿ ನೂತನವಾಗಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಪ್ರಾರಂಭೋತ್ಸವ ಜೂ.9ರಂದು ನಡೆಯಿತು.

ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಉದ್ಯೋಗಿ ರಾಮದಾಸ್ ರೈ ಮದ್ಲ ತರಗತಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆದಿರುವುದು ಸಂತಸ ತಂದಿದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆಗಳು ಏರ್ಪಟ್ಟಿದೆ. ಇಂದು ವಿದ್ಯಾಸಂಸ್ಥೆ ಉಳಿಯಬೇಕಾದರೆ, ಏನಾದರೂ ಹೊಸತನ ವಿದ್ಯಾ ಸಂಸ್ಥೆಯಲ್ಲಿ ಇರಬೇಕಾಗುತ್ತದೆ. ಈ ವಿದ್ಯಾಸಂಸ್ಥೆ ಮಾದರಿ ವಿದ್ಯಾ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ,ಶಾಲೆಯು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಈ ಬೆಳವಣಿಗೆಗೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು, ಪೋಷಕರು, ದಾನಿಗಳು, ಜನಪ್ರತಿನಿಧಿಗಳು, ಹಾಗೂ ಅಧಿಕಾರಿಗಳು ಕಾರಣ. ನಮ್ಮೂರಿನ ವಿದ್ಯಾ ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುಲು, ಪ್ರತಿಯೊಬ್ಬ ನ ಸಹಕಾರ ಅಗತ್ಯ. ಪಂಚಾಯತ್ ಸದಾ ಈ ಸಂಸ್ಥೆಯೊಂದಿಗೆ ಇದೆ ಎಂದು ಶುಭ ಹಾರೈಸಿದರು‌.

ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ನಿವೃತ್ತ ಸೈನಿಕ ಡಿ.ಅಮ್ಮಣ್ಣ ರೈ ಪಾಪೆಮಜಲು, ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಕೃಷಿಕರಾದ ಸದಾಶಿವ ಮಣಿಯಾಣಿ ಕುತ್ಯಾಡಿ, ಕುಂಞಿ ರಾಮ ಮಣಿಯಾಣಿ ಕುತ್ಯಾಡಿ, ತಿಲಕ್ ರೈ ಕುತ್ಯಾಡಿ, ಮನೋಜ್ ರೈ ಪಾಪೆಮಜಲು, ಹಾಜಿ ಇಸ್ಮಾಯಿಲ್ ಕೌಡಿಚ್ಚಾರು, ಉಮಾವತಿ ಪಾದೆಲಾಡಿ, ಎಸ್ಡಿಎಂಸಿ ಉಪಾಧ್ಯಕ್ಷೆ ನಯನ, ಸರ್ಕಾರಿ ಪ್ರೌಢಶಾಲೆ ಪಾಪೆಮಜಲು ಇದರ ದೈ.ಶಿ.ಶಿಕ್ಷಕಿ ಪ್ರವೀಣ ರೈ, ಮುಖ್ಯೋಪಾಧ್ಯಾಯಿನಿ ಶಶಿಕಲಾ, ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಪ್ಪಯ್ಯನಾಯ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವರ ಸಹಕಾರ ಯಾಚಿಸಿ, ಶುಭ ಹಾರೈಸಿದರು.

ಕೊಡುಗೆ
ಎಲ್.ಕೆ.ಜಿ ನೂತನ ವಿದ್ಯಾರ್ಥಿನಿ ವೇದಿಕ ಇವರ ಪೋಷಕರು ವಿದ್ಯಾರ್ಥಿಗಳಿಗೆ ಊಟದ ತಟ್ಟೆ ಕೊಡುಗೆಯಾಗಿ ನೀಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಅನಿತಾ ಆಚಾರಿಮೂಲೆ, ಪುಷ್ಪಲತಾ ಮರತ್ತಮೂಲೆ ಮತ್ತು ನಾರಾಯಣ ನಾಯ್ಕ ಚಾಕೋಟೆ, ಶಿಕ್ಷಕರಾದ ಮೇಬಲ್ ಡಿ ಸೋಜ, ಸ್ವಾತಿ ಕೆ.ಜೆ, ಕಿರಣ್ ರಾಜ್ ಎಸ್,ಆಂಗ್ಲ ಮಾಧ್ಯಮ ಶಿಕ್ಷಕಿಯರಾದ ಶಾಂಭವಿ, ಎಸ್ ಮತ್ತು ಸಹಾಯಕಿ ತೃಪ್ತಿ, ಎಸ್ ಡಿಎಂಸಿ ಸದಸ್ಯರಾದ, ಅನಿತಾ ಬಳ್ಳಿಕಾನ, ದಯಾನಂದ ಗೌಡ ಆಕಾಯಿ, ರಾಜೇಶ್ ಗೌಡ ಕನ್ನಯ, ರಾಧಾಕೃಷ್ಣ ಎರ್ಕ, ದಿನೇಶ್ ಮರತ್ತಮೂಲೆ, ದಿನೇಶ್ ಬಪ್ಪಪುಂಡೇಲು, ಮಾಲತಿ ಪಾಪೆಮಜಲು, ಮಮತಾ ಹೊಸಗದ್ದೆ, ಲೀಲಾವತಿ ಪಾಪೆಮಜಲು ಹಾಗೂ ಪೋಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕರಿಸಿದರು.

ಶಿಕ್ಷಕಿ ಜಯಲತ ಬಿ.ಕೆ ಸ್ವಾಗತಿಸಿ, ಶಿಕ್ಷಕಿರಜನಿ ಕೆ.ಆರ್ ವಂದಿಸಿದರು. ಶಿಕ್ಷಕಿ ಪುಷ್ಪಾವತಿ ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here