ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪ ಇಲ್ಲಿಯ ಶಾಲಾ ಮಂತ್ರಿ ಮಂಡಲ ರಚನೆಯು ಚುನಾವಣೆಯ ಮೂಲಕ ನಡೆಯಿತು. ಶಾಲಾ ನಾಯಕನಾಗಿ ಬಿತಿನ್ ಹಾಗೂ ಉಪನಾಯಕಿಯಾಗಿ ಜನನಿ ಆಯ್ಕೆಯಾದರು.
ಸ್ವಚ್ಛತಾ ಮಂತ್ರಿ ವಿನ್ಯಾಸ್, ಗ್ರಹ ಮಂತ್ರಿ ಪ್ರಣಮ್ ಕೆ.ಎಲ್, ಗ್ರಂಥಾಲಯ ಮಂತ್ರಿ ತನ್ವಿತ್ ಆರ್.ಎಚ್, ಕಾನೂನು ಮಂತ್ರಿ ಲತಿಕಾ ಎನ್, ವಾರ್ತಾ ಮಂತ್ರಿ ದೀತ್ಯಾ, ಕೃಷಿ ಮಂತ್ರಿ ವೈಶಿಕಾ, ಕ್ರೀಡಾ ಮಂತ್ರಿ ಜೀವಿತ್, ನೀರಾವರಿ ಮಂತ್ರಿ ಕೆ. ಚಿರಾಕ್ಷ, ಆಹಾರ ಮಂತ್ರಿ ಸೂರ್ಯ, ಆರೋಗ್ಯ ಮಂತ್ರಿ ಧನ್ವಿ.ಕೆ, ರಕ್ಷಣಾ ಮಂತ್ರಿ ರಿಶಿಕಾ, ವಿರೋಧ ಪಕ್ಷದ ನಾಯಕಿಯಾಗಿ ದಿವ್ಯ ಆಯ್ಕೆಯಾದರು. ಶಿಕ್ಷಕಿಯರಾದ ಸೌಮ್ಯ, ದಿವ್ಯಾ ವಿ ಚುನಾವಣೆ ಪ್ರಕ್ರಿಯೆ ನಡೆಸಿದರು. ಶಾಲಾ ಮುಖ್ಯಗುರು ಜಯಂತ್ ವೈ ಪ್ರಮಾಣ ವಚನ ಬೋಧಿಸಿದರು.