ಪುತ್ತೂರು: ಎಪಿಎಂಸಿ ರಸ್ತೆಯಲ್ಲಿರುವ ಬರಕೆರೆ ವೆಂಕಟರಮಣ ಕಮ್ಯೂನಿಟಿ ಹಾಲ್‌ನಲ್ಲಿ ಅಬ್ಸಲ್ಯೂಟ್ ಲರ್ನಿಂಗ್ ಅಕಾಡೆಮಿ ಜೂ.10ರಂದು ಶುಭಾರಂಭಗೊಂಡಿತು.
ಪುತ್ತೂರಿನ ವಕೀಲ ಮನೋಹರ್ ಎ. ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ಸಲ್ಯೂಟ್ ಲರ್ನಿಂಗ್ ಅಕಾಡೆಮಿ ಸಂಸ್ಥೆಯ ನಿರ್ದೇಶಕ ವಿಘ್ನೇಶ್ ಹೆಚ್, ಸಂಸ್ಥೆಯ ಮುಖ್ಯಸ್ಥರಾದ ಚೇತನಾ ಎ, ವರದರಾಜ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ನಮ್ಮಲ್ಲಿ ಸೈನ್ಸ್ (ಪಿಸಿಎಂಬಿ), ಕಾಮರ್ಸ್ (ಅಕೌಂಟೆನ್ಸ್ ಮತ್ತು ಸ್ಟಾಟಿಟಿಕ್ಸ್) ಮತ್ತು 9ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ತರಗತಿಗಳು ಸಂಜೆ ನಡೆಯಲಿದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಯೂ ನಡೆಯಲಿದ್ದು ಜತೆಗೆ ಜೆಇಇ, ನೀಟ್ ಮತ್ತು ಕೆಸಿಇಟಿಗೆ ಕೋಚಿಂಗ್ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8861248718 ಅಥವಾ 9535622839 ನಂಬರ್ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.