ಕುದ್ಮಾರು ಶಾಲಾ ಮಂತ್ರಿಮಂಡಲ ರಚನೆ – ನಾಯಕಿ ಫಾತಿಮಾತ್ ಶೈಮ, ಉಪನಾಯಕಿ ವಂದನಾ ಕೆ.ಹೆಚ್. ಆಯ್ಕೆ

0

ಕಾಣಿಯೂರು: ಕುದ್ಮಾರು ಸ. ಉ. ಹಿ.ಪ್ರಾ.ಶಾಲಾ 2025-26ನೇ ಸಾಲಿನ ಮಂತ್ರಿ ಮಂಡಲವು ಚುನಾವಣೆ ಪ್ರಕ್ರಿಯೆ ಮೂಲಕ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಫಾತಿಮಾತ್ ಶೈಮ 8ನೇ ತರಗತಿ, ವಿದ್ಯಾರ್ಥಿ ಉಪನಾಯಕಿಯಾಗಿ ವಂದನಾ ಕೆ. ಹೆಚ್. 7ನೇ ತರಗತಿ ಆಯ್ಕೆಯಾಗಿರುತ್ತಾರೆ.

ವಿರೋಧ ಪಕ್ಷದ ನಾಯಕನಾಗಿ ಬಿಪಿನ್ ಚಂದ್ರ 8ನೇ ತರಗತಿ, ಸಭಾಧ್ಯಕ್ಷರಾಗಿ ಪ್ರೀತಿ. ಎನ್ 8ನೇ ತರಗತಿ ಆಯ್ಕೆಯಾದರು. ಸಚಿವ ಸಂಪುಟದ ರಚನೆಯಲ್ಲಿ ಗೃಹ ಮಂತ್ರಿ ಪ್ರೀತಮ್ ಮತ್ತು ಸುದರ್ಶನ್ ಎನ್, ನೀರಾವರಿ ಮಂತ್ರಿ ದೀಕ್ಷಿತ್ ಬಿ. ಯು ಮತ್ತು ಮೊಹಮ್ಮದ್ ಆದಿಲ್, ಕೃಷಿ ಮಂತ್ರಿ ತರುಣ್ ಕೆ, ಶಿಕ್ಷಣ ಮಂತ್ರಿ ದಿವ್ಯಾ ಎಂ, ಅರೋಗ್ಯ ಮಂತ್ರಿ ಫಾತಿಮಾತ್ ನಿದಾ, ಸಾಂಸ್ಕೃತಿಕ ಮಂತ್ರಿ ಸಿಂಚನ.ಪಿ, ಕ್ರೀಡಾ ಮಂತ್ರಿ ಪ್ರತೀಕಾ.ಕೆ, ಗ್ರಂಥಾಲಯ ಮಂತ್ರಿ ಫಾತಿಮಾತ್ ಫಿದಾ, ಸ್ವಚ್ಛತಾ ಮಂತ್ರಿ ಲಾವಣ್ಯ ವಿ. ಎಸ್, ಆಹಾರ ಮಂತ್ರಿ ಆಯಿಷತ್ ಲಿಝಾನ ಆಯ್ಕೆಮಾಡಲಾಯಿತು. ಮುಖ್ಯಗುರುಗಳಾದ ಶ್ರೀಲತಾ ಪ್ರಮಾಣವಚನ ಬೋಧಿಸಿದರು.


ಚುನಾವಣಾ ಪ್ರಕ್ರಿಯೆ ಮೂಲಕ ನಡೆದ ಈ ಆಯ್ಕೆಯಲ್ಲಿ ಚುನಾವಣಾಧಿಕಾರಿಯಾಗಿ ಶ್ರೀಲತಾ, ಮತಗಟ್ಟೆ ಅಧಿಕಾರಿಗಳಾಗಿ ಪ್ರಿಯಾಂಕಾ ಕೆ ಎಸ್, ವೀಣಾ ಕೆ, ಸುಜಾತ ಎ, ಸುಜಾತ ಬಿ ವೀರ ಡಿ’ಸೋಜಾ, ಸರೋಜಾ ಕೆ ಭಾಗವಹಿಸಿದ್ದರು. ಸಂಧ್ಯಾ, ಸುಮಲತಾ, ಭವ್ಯ ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು.

LEAVE A REPLY

Please enter your comment!
Please enter your name here