





ಪುತ್ತೂರು: ಆರೋಗ್ಯಧಾಮ ಯೋಗ ವಿದ್ಯಾಕೇಂದ್ರ (ರಿ) ಮಂಗಳೂರು, ತಪಸ್ವಿನಿ ಸ್ಕೂಲ್ ಆಫ್ ಯೋಗಾ, ಮಂಗಳೂರು ಹಾಗೂ ಕೆನರಾ ಹೈಸ್ಕೂಲ್ ಅಸೋಸಿಯೇಷನ್ (ರಿ) ಮಂಗಳೂರು ಇವರು ಜಂಟಿ ಆಯೋಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 14ರ ವಯೋಮಾನದ ಬಾಲಕಿಯರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿನ 6 ನೇ ತರಗತಿ ವಿದ್ಯಾರ್ಥಿನಿ ವರ್ಷಾ.ವಿ ವೀರಮಂಗಲ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ.


ಜಿಲ್ಲಾ ಮಟ್ಟ, ರಾಜ್ಯ ಮಟ್ಟ , ಹಾಗೂ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಹೆಗ್ಗಳಿಕೆ ಈಕೆಯದ್ದು, ಈಕೆಗೆ ಶಾಲಾ ಯೋಗ ಶಿಕ್ಷಕಿ ಹೇಮಾ ಅಗಳಿಯವರು ಮತ್ತು ತರಬೇತಿ ನೀಡಿರುತ್ತಾರೆ. ಮುಖ್ಯ ಶಿಕ್ಷಕರಾದ ತಾಲನಾಥ ಸವಣೂರು ಹಾಗೂ ಶಾಲಾ ಶಿಕ್ಷಕ ವೃಂದ ಸಹಕಾರ ನೀಡಿರುತ್ತಾರೆ.





ಈಕೆ ಬಡಗನ್ನೂರು ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರಿಮತಿ ಶಾರದಾ .ಕೆ ಹಾಗೂ ಹರೀಶ್ ವೀರಮಂಗಲ ಇವರ ಪುತ್ರಿ.









