ನಿಡ್ಪಳ್ಳಿ: ದ.ಕ.ಜಿ.ಪಂ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಇದರ ಮಂತ್ರಿಮಂಡಲವನ್ನು ರಚಿಸಲಾಯಿತು.
ಮುಖ್ಯ ಮಂತ್ರಿಯಾಗಿ 8 ನೇ ತರಗತಿಯ ಅಯಿಷತ್ ಸಫಾ, ಉಪ ಮುಖ್ಯ ಮಂತ್ರಿಯಾಗಿ 8 ನೇ ತರಗತಿಯ ರಿತಿಕ್ ಆರ್.ಬಿ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಮೆಹರೂಫ, ಹಣಕಾಸು ಮಂತ್ರಿಯಾಗಿ ಆಯಿಶತ್ ಶಮ್ನಾ,ಆರೋಗ್ಯ ಮಂತ್ರಿಯಾಗಿ ಸಂತೋಷ್ ಕುಮಾರ್, ಆಹಾರ ಮಂತ್ರಿಯಾಗಿ ಶ್ವೇತಾ , ಕ್ರೀಡಾ ಮಂತ್ರಿಯಾಗಿ ಯೂಸುಫ್ ಆದಿಲ್, ಸಾಂಸ್ಕೃತಿಕ ಮಂತ್ರಿಯಾಗಿ ಭೂಮಿಕಾ.ಬಿ, ವಾರ್ತಾ ಮಂತ್ರಿಯಾಗಿ ಆಸಿಯ ಅಮ್ನ, ಸ್ವಚ್ಚತಾ ಮಂತ್ರಿಯಾಗಿ ನಸ್ರೀನಾ, ಕಾನೂನು ಮಂತ್ರಿಯಾಗಿ ಆಸಿಯಾ ಅಮ್ನ, ತೋಟಗಾರಿಕೆ ಮಂತ್ರಿಯಾಗಿ ಜ್ಞಾನೇಶ್ ಕೆ.ಬಿ ಇವರನ್ನು ಆಯ್ಕೆ ಮಾಡಲಾಯಿತು.
ಮುಖ್ಯ ಗುರು ಜಾನಕಿಯವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸಹಶಿಕ್ಷಕರಾದ ಬಾಲಕೃಷ್ಣ. ಕೆ, ದೈಹಿಕ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ, ಲಕ್ಷ್ಮೀದೇವಿ ಬಿ.ಎನ್, ಯಚ್.ಜೆ ಗೀತಾ ಲೋಬೊ ಸಹಕರಿಸಿದರು.
