ವಿಟ್ಲ ಜೇಸಿ ಶಾಲೆಯಲ್ಲಿ 11ನೇ ವರ್ಷದ ವಿಶ್ವ ಯೋಗ ದಿನಾಚರಣೆ

0

ವಿಟ್ಲ: ಬಸವನಗುಡಿಯಲ್ಲಿರುವ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ 11ನೇ ವರ್ಷ ದ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆ ಯ ಕಾರ್ಯದರ್ಶಿ ಎ. ಮೋಹನ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರಾದ ಹರಿಪ್ರಸಾದ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮ ದಲ್ಲಿ ಶಾಲಾ ಆಡಳಿತಾಧಿಕಾರಿ ಎ ರಾಧಾಕೃಷ್ಣ ಎರುoಬು, ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.

ಯೋಗ ದಿನದ ಪ್ರಯುಕ್ತ ವಿದ್ಯಾರ್ಥಿಗಳು ಯೋಗ ಪ್ರತಿಜ್ಞೆ ಯನ್ನು ಮಡಿದರು. 8ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಯವರಿಂದ ಯೋಗ ಪ್ರದರ್ಶನ ನಡೆಯಿತು. ಬಳಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪತಂಜಲಿ ಯೋಗ ಸಂಸ್ಥೆ ಯ ವಿವಿಧ ಶಿಕ್ಷಕರಿಂದ ಯೋಗಾಭ್ಯಾಸ ನಡೆಸಲಾಯಿತು. ಶಿಕ್ಷಕಿ ಕವಿತಾ ಶೇಷಪ್ಪ ಪ್ರಾರ್ಥಿಸಿ, ಶಿಕ್ಷಕಿ ದೇವಿಕಾ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಜಯರಾಮ ರೈ ಯವರು ವಂದಿಸಿದರು.

LEAVE A REPLY

Please enter your comment!
Please enter your name here