ಬೆಂಗಳೂರಿನ ಶೆರವಿನ್ ವಿಲಿಯಮ್ಸ್ ಕಂಪನಿ, ಬೆಂಗಳೂರು ಜೆಪಿ ನಗರ ರೋಟರಿ ಕ್ಲಬ್‌ನಿಂದ ಹಳೆನೇರೆಂಕಿ ಶಾಲೆಗೆ ಕೊಡುಗೆ

0

ರಾಮಕುಂಜ: ಬೆಂಗಳೂರಿನ ಬಹುರಾಷ್ಟ್ರೀಯ ಕಂಪೆನಿ ಶೆರವಿನ್ ವಿಲಿಯಮ್ಸ್ ಹಾಗೂ ರೋಟರಿ ಬೆಂಗಳೂರು ಜೆ.ಪಿ.ನಗರ ಇವರು ಶತಮಾನೋತ್ಸವ ಸಂಭ್ರಮದಲ್ಲಿರುವ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಗೆ ಲಕ್ಷಾಂತರ ರೂ.ಮೌಲ್ಯದ ಹಲವು ಕೊಡುಗೆಗಳನ್ನು ಇತ್ತೀಚೆಗೆ ಹಸ್ತಾಂತರಿಸಿದರು.

ಶಾಲೆಗೆ ಅವಶ್ಯಕವಾದ ೫ ಕಂಪ್ಯೂಟರ್, ಕಂಪ್ಯೂಟರ್ ಟೇಬಲ್, ನಲಿಕಲಿ ತರಗತಿಗೆ ೮ ರೌಂಡ್ ಟೇಬಲ್, ೫೦ ಮಿನಿ ಚಯರ್, ಗ್ರಂಥಾಲಯಕ್ಕೆ ೧೦ ಕಪಾಟು, ೫೦ ಲೀಟರ್ ಸಾಮರ್ಥ್ಯದ ವಾಟರ್ ಫಿಲ್ಟರ್, ೨೦ ಸೆಟ್ ಬೆಂಚು ಹಾಗೂ ಡೆಸ್ಕುಗಳನ್ನು ಕೊಡುಗೆಯಾಗಿ ನೀಡಿದರು.


ಶೆರವಿನ್ ವಿಲಿಯಮ್ಸ್ ಕಂಪನಿಯ ಮಾನವ ಸಂಪನ್ಮೂಲ ಹಾಗೂ ಸಿಆರ್‌ಎಸ್ ಅಧಿಕಾರಿ ರತನ್ ರೈ, ಬೆಂಗಳೂರು ಜೆಪಿನಗರ ರೋಟರಿ ಸಂಸ್ಥೆ ಅಧ್ಯಕ್ಷ ಸುರೇಶ್ ರಾಬರ್ಟ್, ಹಳೆನೇರೆಂಕಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ್ ರೈ ರಾಮಜಾಲು, ಉಪಾಧ್ಯಕ್ಷರಾದ ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ಧರ್ಣಪ್ಪ ಗೌಡ ಅಲೆಪ್ಪಾಡಿ, ಕೋಶಾಧಿಕಾರಿ ಜನಾರ್ದನ ಕದ್ರ, ಎಸ್‌ಡಿಎಂಸಿ ಅಧ್ಯಕ್ಷ ವೀರೇಂದ್ರ ಪಾಲೆತಡ್ಡ, ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ, ಎಸ್‌ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here