ಪುತ್ತೂರು:ಅನಿಕೇತನ ಲಾ ಚೇಂಬರ್ಸ್ ನ ನೂತನ ಕಚೇರಿ ಜು.7 ರಂದು ಬೆಳಗ್ಗೆ 9.30ಕ್ಕೆ ಎಂಎಸ್ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
ನಿವೃತ್ತ ಶಿಕ್ಷಕರೂ ಆಗಿರುವ ಪುತ್ತೂರು ಭಾ.ಗೌ. ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯಕ್ ಆಜೇರು ಉದ್ಘಾಟಕರಾಗಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಪುತ್ತೂರಿನ ಕಜೆ ಲಾ ಚೇಂಬರ್ಸ್ ನ ಮಹೇಶ್ ಕಜೆ, ಪುತ್ತೂರಿನ ಸಿವಿಲ್ ಲಾ ಚೇಂಬರ್ಸ್ ನ ಸೂರ್ಯನಾರಾಯಣ ಎನ್.ಕೆ. ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲ ಶ್ರೀಗಿರೀಶ ಮಳಿ ವಹಿಸಿಕೊಳ್ಳಲಿದ್ದಾರೆ ಎಂದು ಅನಿಕೇತನ ಲಾ ಚೇಂಬರ್ಸ್ ನ ನ್ಯಾಯವಾದಿಗಳು ಕೃಷ್ಣಪ್ರಸಾದ್ ನಡ್ಸಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.