ಅಧ್ಯಕ್ಷ : ರಂಜಿತ್ ಕಾರ್ಯದರ್ಶಿ : ದಿವ್ಯಾ ಸಭಾಪತಿ ರೊ ಪ್ರೀತಾ ಹೆಗ್ಡೆ
ಪುತ್ತೂರು: ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು ಪ್ರಾಯೋಜಿತ ರೋಟರಾಕ್ಟ್ ಕ್ಲಬ್ ಪ್ರಗತಿ ಪಾರಾ ಮೆಡಿಕಲ್ ನ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು, ಅಧ್ಯಕ್ಷರಾಗಿ ರಂಜಿತ್, ಕಾರ್ಯದರ್ಶಿಯಾಗಿ ದಿವ್ಯಾ ಹಾಗೂ ಸಭಾಪತಿಗಳಾಗಿ ಪ್ರಗತಿ ಪಾರಾ ಮೆಡಿಕಲ್ ಕಾಲೇಜ್ ಇದರ ಪ್ರಾಂಶುಪಾಲೆ ರೊ. ಪ್ರೀತಾ ಹೆಗ್ಡೆ ಆಯ್ಕೆಯಾಗಿರುತ್ತಾರೆ.
ನಿಕಟಪೂರ್ವ ಅಧ್ಯಕ್ಷರಾಗಿ ಕವಿತಾ ಎಂ, ಉಪಾಧ್ಯಕ್ಷರಾಗಿ ಕು ಅಭಿಜ್ಞಾ ಜೊತೆ ಕಾರ್ಯದರ್ಶಿಯಾಗಿ ಕು.ಹಿತಾ ಕೋಶಾಧಿಕಾರಿಯಾಗಿ ಶಶಾಂಕ್, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ದೀಕ್ಷಾಯಿನಿ ಕಮ್ಯುನಿಟಿ ಸರ್ವಿಸ್ ನಿರ್ದೇಶಕರಾಗಿ ಪ್ರಣಮ್ಯ, ವೊಕೇಷನಲ್ ಸರ್ವಿಸ್ ನಿರ್ದೇಶಕರಾಗಿ ಪೂಜಾ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಶರೀಫ್, ಬುಲೆಟಿನ್ ಎಡಿಟರ್ ಆಗಿ ಫವಾಜ್, ಕ್ರೀಡಾ ಕಾರ್ಯದರ್ಶಿಯಾಗಿ ತಿಲಕ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚೈತ್ರ, ಸಾರ್ಜೆಂಟ್ ಅಟ್ ಅರ್ಮ್ಸ್ ಆಗಿ ಪ್ರತಾಪ್ ರವರು ಆಯ್ಕೆಗೊಂಡಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣವು ಜು.6 ರಂದು ಬೊಳುವಾರು ಮಹಾವೀರ ವೆಂಚರ್ ಸಭಾಂಗಣದಲ್ಲಿ ನಡೆಯಲಿದೆ.