ಮದುವೆಯಾಗುವುದಾಗಿ ವಂಚನೆ ಪ್ರಕರಣ : ಆರೋಪಿ ಇತರರೊಂದಿಗೆ ಕಾರಿನಲ್ಲಿರುವ ಫೋಟೋ ವೈರಲ್ ! ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ

0

ಪುತ್ತೂರು: ಮದುವೆಯಾಗುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂದಪಟ್ಟ ಆರೋಪಿ ಶ್ರೀಕೃಷ್ಣ ಎಂಬವರು ಇತರರೊಂದಿಗೆ ಕಾರಿನಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆರೋಪಿ ನಾಪತ್ತೆಯಾದ ಬೆನ್ನಲ್ಲೇ ಈ ಫೋಟೋ ವೈರಲ್ ಆಗಿರುವುದು ಹಲವರಲ್ಲಿ ಸಂಶಯಕ್ಕೆ ಕಾರಣವಾಗಿದೆ.


ಸಹಪಾಠಿ ಯುವತಿಗೆ ವಂಚನೆ ಪ್ರಕರಣದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶ್ರೀಕೃಷ್ಣ ನಾಪತ್ತೆಯಾಗಿ 10 ದಿನ ಕಳೆದಿದೆ. ಇದೀಗ ಆರೋಪಿ ಕಾರೊಂದರಲ್ಲಿ ಇತರರೊಂದಿಗೆ ಇರುವ ಫೋಟೋ ವೈರಲ್ ಆಗುತ್ತಿದೆ. ಪೊಲೀಸರು ಈ ಕುರಿತು ತನಿಖೆ ನಡೆಸಬೇಕಾಗಿದೆ.


ಫೋಟೋ ವೈರಲ್ – ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ
ಚುನಾವಣೆ ಸಂದರ್ಭ ಬಿಜೆಪಿ ಕಾರ್ಯಕರ್ತ ಪ್ರಜ್ವಲ್ ಘಾಟೆ ಕಾರಿನಲ್ಲಿ ತೆಗೆದ ಫೋಟೋ ಅನ್ನು ಯಾರೋ ಇದೀಗ ವೈರಲ್ ಮಾಡುತ್ತಿರುವುದು ತಿಳಿದು ಬಂದಿದೆ.‌ ನೂರಾರು ಹೇಳಿಕೆ ಈ ಕುರಿತು ಹೇಳುತ್ತಿರುವುದು ನಮಗೆ ನೋವನ್ನು ತಂದಿದೆ. ಟಿ ಆರ್ ಪಿ ಗಾಗಿ ಯಾವುದನ್ನೂ ಮಾಡಬಲ್ಲೆ ಎಂಬ ಪತ್ರಿಕಾ ಸಂದೇಶ ನೀಡುವುದು ನೋವನ್ನು ತಂದಿದೆ ಎಂದು ಅರುಣ್ ಕುಮಾರ್ ಪುತ್ತಿಲ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here