ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಯಂ. ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ, ಪುತ್ತೂರಿನವರೊಂದಿಗೆ ಹತ್ತೂರಿನವರೂ ಕಾತರದೊಂದಿಗೆ ಕಾಯುತ್ತಿರುವ, ಪ್ರಖ್ಯಾತ ಮಿಲ್ಗಳಿಂದ ನೇರವಾಗಿ ಖರೀದಿಸಿ ಅತೀ ಕಡಿಮೆ ಲಾಭಾಂಶವಿಟ್ಟು ಮಿತ ದರದಲ್ಲಿ ಮಾರಾಟ ಮಾಡುವ ಕಂಪೆನಿ ಸೀರೆಗಳು ಮತ್ತು ಇನ್ನಿತರ ಜವುಳಿಗಳ “ಆಷಾಡ ಸೇಲ್” ಜು.7ರಿಂದ ಆರಂಭಗೊಂಡಿದೆ.

ಆರಂಭದ ದಿನದಿಂದಲೇ ಗ್ರಾಹಕರು ಮಳಿಗೆಗೆ ಧಾವಿಸಿ ಬರುತ್ತಿದ್ದು ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಊರ, ಪರವೂರ ಗ್ರಾಹಕರಿಂದ ಮಳಿಗೆಯು ತುಂಬಿತುಳುಕುತ್ತಿದೆ. ಅತೀ ದೊಡ್ಡಮಟ್ಟದಲ್ಲಿ ಗ್ರಾಹಕರಿಗೋಸ್ಕರ ಸಾರಿ ಮತ್ತು ಇನ್ನಿತರ ಜವುಳಿಗಳನ್ನು ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನವು ಹೊಸ ಹೊಸ ಸ್ಟಾಕ್ಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವುದು ಮತ್ತು ಕಡಿಮ ಲಾಭಾಂಶದೊಂದಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ.
ಮಹಿಳೆಯರ, ಮಕ್ಕಳ, ಪುರುಷರ ವಿವಿಧ ವಿನ್ಯಾಸದ ಬಟ್ಟೆಗಳು:
ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಡಿಕೇರಿ, ಮೈಸೂರು, ಬೆಂಗಳೂರಿನಿಂದ ಕೂಡ ಈ ಆಷಾಢ ಮಾಸದಲ್ಲಿ ಏರ್ಪಡಿಸುವ ಅತೀ ದೊಡ್ಡ ಮಾರಾಟಕ್ಕೆ ಜನರು ಆಗಮಿಸುತ್ತಿದ್ದಾರೆ. ಮಳಿಗೆಯಲ್ಲಿ ಚಿಕ್ಕ ಮಕ್ಕಳಿಂದ ಹಿರಿಯರವರೆಗಿನ ವಿವಿಧ ಬಟ್ಟೆಗಳು ಲಭ್ಯವಿದೆ. ಮಹಿಳೆಯರ ಸಾರಿ, ಸಲ್ವಾರ್, ನೈಟಿಗಳು, ಟಾಪ್ಗಳು, ಪುರುಷರ ಪ್ಯಾಂಟ್, ಶರ್ಟ್, ಬೆಡ್ಸ್ಪ್ರೆಡ್, ಬ್ಲಾಂಕೆಟ್ ಹಾಗೂ ಎಲ್ಲಾ ತರಹದ ಜವುಳಿಗಳು ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
