ಪುತ್ತೂರು: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಪುತ್ತೂರಿಗೆ ಜು.8ರಂದು ರಾತ್ರಿ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಪುತ್ತೂರು ನಗರ ಪೊಲೀಸ್ ಠಾಣೆ ಬಳಿಯಿಂದ ದರ್ಬೆ ವೃತ್ತದ ತನಕ ರಾತ್ರಿ 9.45ರ ಸುಮಾರಿಗೆ ಪಥಸಂಚಲನ ನಡೆಯಿತು.
ವಿಶೇಷ ಕಾರ್ಯಪಡೆ ಜೊತೆ ಡಿವೈಎಸ್ಪಿ ಅರುಣ್ ನಾಗೇಗೌಡ, ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಅವರು ಭಾಗವಹಿಸಿದರು.
ರಾತ್ರಿ ಪಥಸಂಚಲನ ನಡೆದಿದ್ದರಿಂದ ಪೇಟೆಯಲ್ಲಿ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಜೊತೆಗೆ ಜನಸಂಖ್ಯೆಯು ವಿರಳವಾದ್ದರಿಂದ ಬಹತೇಕ ಜನರಿಗೆ ವಿಶೇಷ ಕಾರ್ಯಪಡೆಯ ಕುರಿತು ಮಾಹಿತಿ ಇಲ್ಲದಂತಾಗಿದೆ.