ವಿಟ್ಲ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪುತ್ತೂರು ವಲಯ ಒಡಿಯೂರು ಶ್ರೀ ನವಜ್ಯೋತಿ ತಂಡದ ಸದಸ್ಯರಾದ ದುರ್ಗಾದಾಸ್ ರವರು ಇತ್ತೀಚೆಗೆ ಹೃದಯಘಾತದಿಂದಾಗಿ ನಿಧನರಾಗಿದ್ದು, ಅವರಿಗೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ ಪರಿಹಾರ ನಿಧಿಯಿಂದ ವಿಮಾ ಮೊತ್ತದ ಚೆಕ್ ಅನ್ನು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಜಯಪ್ರಕಾಶ್ ರೈ ಯನ್. ರವರು ವಿತರಿಸಿದರು.
ಈ ಸಂದರ್ಭದಲ್ಲಿ ಯೋಜನೆಯ ಪುತ್ತೂರು ತಾಲೂಕಿನ ಮೇಲ್ವಿಚಾರಕಿ ಸವಿತಾ ರೈ, ಸಂಯೋಜಕಿ ಶಶಿ ಡಿ., ಸೇವಾ ದೀಕ್ಷಿತೆ ಸುನಂದಾ ರೈ, ಸಹಕಾರಿಯ ಸಿಬ್ಬಂದಿ ಚಂದ್ರಶೇಖರ್ ಉಪಸ್ಥಿತರಿದ್ದರು.