ನೆಲ್ಯಾಡಿ : ಉದ್ಯೋಗಖಾತ್ರಿ ಯೋಜನೆಯ 5.20 ಲಕ್ಷ ರೂ.ಅನುದಾನ ಹಾಗೂ ಪಂಚಾಯತ್ನ ಸ್ವಂತ ನಿಧಿ ಬಳಸಿಕೊಂಡು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಹಿಂಬದಿ ಸ್ಮಶಾನ ನಿರ್ಮಾಣಕ್ಕೆ ಜು.8ರಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಗುದ್ದಲಿ ಪೂಜೆ ನೆರವೇರಿಸಿದರು. ವಾರ್ಡ್ನ ಸದಸ್ಯರಾದ ಅಬ್ದುಲ್ ಜಬ್ಬಾರ್, ಉಷಾಜೋಯಿ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮೋಹನ್ಕುಮಾರ್, ಗುತ್ತಿಗೆದಾರ ಶಿವಪ್ರಕಾಶ್ ಬೀದಿಮಜಲು ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ಅಂಗು ಸ್ವಾಗತಿಸಿದರು.