ಪಾಣಾಜೆ ಬಿ.ಜೆ.ಪಿ ಶಕ್ತಿ ಕೇಂದ್ರದಿಂದ ಸ್ವಾಗತ
ನಿಡ್ಪಳ್ಳಿ : ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೆರವಾಗಿದ್ದ ವೈದ್ಯಾಧಿಕಾರಿ ಹುದ್ದೆಗೆ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ವೇದಾವತಿ. ಜೆ ಬಲ್ಲಾಳ್ ರವರು ಜು.10 ರಂದು ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಬಿ.ಜೆ.ಪಿ ವತಿಯಿಂದ ಸ್ವಾಗತ;
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ವೇದಾವತಿ.ಜೆ ಬಲ್ಲಾಳ್ ಇವರನ್ನು ಪಾಣಾಜೆ ಬಿ.ಜೆ.ಪಿ ಶಕ್ತಿಕೇಂದ್ರದ ವತಿಯಿಂದ ಸ್ವಾಗತಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘದ ಕಾರ್ಯದರ್ಶಿ ನಾರಾಯಣ ಪ್ರಕಾಶ್ ನೆಲ್ಲಿತಿಮಾರು, ಶಕ್ತಿ ಕೇಂದ್ರದ ಅಧ್ಯಕ್ಷ ಪ್ರೇಮ್ ರಾಜ್ ಆರ್ಲಪದವು, ಪುತ್ತೂರು ಗ್ರಾಮಾಂತರ ಮಂಡಲ ಯುವ ಮೋರ್ಚಾ ಸದಸ್ಯ ಪ್ರದೀಪ್ ಪಾಣಾಜೆ , ಮಹಿಳಾ ಮೋರ್ಚಾದ ಮಂಡಲ ಕಾರ್ಯದರ್ಶಿ ಜಯಶ್ರೀ ದೇವಸ್ಯ, ಪಂಚಾಯತ್ ಸದಸ್ಯೆ ಸುಲೋಚನ,ಬೂತ್ ಅಧ್ಯಕ್ಷ ಸಂದೀಪ್ ವಾಣಿಯಣ್ ಬೂತ್ ಕಾರ್ಯದರ್ಶಿ ಕೀರ್ತಿರಾಜ್ ಉಡ್ಡಂಗಳ,ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಸಂತೋಷ್ ರೈ ಗಿಳಿಯಾಲು,ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ರವಿಶಂಕರ ಶರ್ಮ ಬೊಳುಕಲ್ಲು, ಬೂತ್ ಪದಾಧಿಕಾರಿಗಳಾದ ಹರೀಶ್ ಕುಲಾಲ್ ಆರ್ಲಪದವು ,ಕರುಣಾಕರ್ ಕುಲಾಲ್ ಆರ್ಲಪದವು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.