ಪುತ್ತೂರು: ಗುರುಪೂರ್ಣಿಮೆಯ ಹಿನ್ನಲೆಯಲ್ಲಿ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಯರ ದರ್ಶನಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿದರು.
ಗುರುವಾರದ ದಿನವಾದ್ದರಿಂದ ರಾತ್ರಿ ಮಠದಲ್ಲಿ ಶ್ರೀ ಗುರುರಾಯರ ವಿಶೇಷ ಪೂಜೆ, ರಥೋತ್ಸವ, ಪಲ್ಲಕಿ ಸೇವೆ ಸಹಿತ ಹಲವು ಸೇವೆಗಳು ನಡೆದವು. ಸಾವಿರಾರು ಮಂದಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.