ಬೊಳುವಾರಿನ ತಮನ್ವಿ ಸಿಲ್ಕ್ಸ್ ಸಾರೀಸ್ ಮಳಿಗೆಯಲ್ಲಿ ಡಿಸ್ಕೌಂಟ್ ಸೇಲ್ : ಮಾನ್ಸೂನ್ ಪ್ರಯುಕ್ತ ವಿಶೇಷ ಆಫರ್

0

ಪುತ್ತೂರು: ಸಿಲ್ಕ್ ಮತ್ತು ಸಾರಿಗಳು ಅಂದರೆ ಮಹಿಳೆಯರಿಗೆ ಯಾವಾಗಲೂ ಅಚ್ಚಮೆಚ್ಟು. ಎಷ್ಟು ಸಾರಿ ಖರೀದಿಸಿದರೂ ಮಹಿಳೆಯರಿಗೆ ಸಾಕು ಎನಿಸುವುದಿಲ್ಲ. ಅದರಲ್ಲೂ ಮುಂಗಾರಿನ ಮಳೆಯ ಸಂಭ್ರಮದೊಂದಿಗೆ ಖರೀದಿಯ ಅನುಭವವೇ ವಿಭಿನ್ನ. ಮಹಿಳೆಯರಿಗೆ ಇಂತಹದೊಂದು ಅವಕಾಶವನ್ನು ಬೊಳುವಾರಿನ ತಮನ್ವಿ ಸಿಲ್ಕ್ಸ್ ಮತ್ತು ಸಾರೀಸ್ ಮಳಿಗೆ ನೀಡುತ್ತಿದೆ.

ಬೊಳುವಾರಿನ ಮುಖ್ಯರಸ್ತೆಯ ಇನ್‌ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ತಮನ್ವಿ ಸಿಲ್ಸ್ಕ್ ಮತ್ತು ಸಾರೀಸ್‌ನಲ್ಲಿ ಮಾನ್ಸೂನ್ ಪ್ರಯುಕ್ತ ಡಿಸ್ಕೌಂಟ್ ಸೇಲ್ ಜು.11ರಿಂದ ಆರಂಭವಾಗಿದೆ.

ಸಾರಿಗಳಿಗೆ, ಟಾಪ್ಸ್, ಸಲ್ವಾರ್ ಗಳಿಗೆ Flat 25% ಡಿಸ್ಕೌಂಟ್, ಪ್ರೀಮಿಯಂ ಕಂಚೀಪಟ್ಟು ಸಾರಿಗಳಿಗೆ 15%ರಿಂದ30% ರಿಯಾಯಿತಿ ಲಭ್ಯವಾಗಲಿದೆ.

ದುಪ್ಪಟ್ಟಾ, ಸಾರಿ ಶೇಪರ್, ಇನ್ನರ್‌ವೇರ್, ರೇಷ್ಮೆ ಸಿಲ್ಕ್, ಸೆಮಿ ಸಿಲ್ಕ್, ಬ್ರೈಡಲ್ ಸಾರಿ, ಕಾಟನ್ ಸಿಲ್ಕ್ ಸಾರಿಗಳು, ಬನಾರಸ್ ಸಾರಿಗಳು, ಸಲ್ವಾರ್ ಸೇರಿದಂತೆ ಮಹಿಳೆಯರ ವಿವಿಧ ಉಡುಪುಗಳು ಲಭ್ಯವಿದೆ. ವಿವಿಧ ವಿನ್ಯಾಸದ, ಕಡಿಮೆ ಬೆಲೆಯ ಉಡುಪುಗಳನ್ನು ಖರೀದಿಸಲು ಮಹಿಳೆಯರಿಗೆ ಅವಕಾಶವಿದೆ. ಡಿಸ್ಕೌಂಟ್ ಸೇಲ್ ಕೆಲವೇ ದಿನಗಳು ಮಾತ್ರ ಲಭ್ಯವಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಲಕ ವಿಜೇತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here