ಬೆಳಂದೂರು ಬಿಜೆಪಿ ಬೂತ್ ಸಮಿತಿ 72 ರಲ್ಲಿ ಗುರು ಪೂರ್ಣಿಮೆ ಆಚರಣೆ- ಗುರುವಂದನಾ ಕಾರ್ಯಕ್ರಮ

0

ಕಾಣಿಯೂರು: ಭಾರತೀಯ ಜನತಾ ಪಾರ್ಟಿ ‌ಸುಳ್ಯ ಮಂಡಲ ಬೆಳಂದೂರು ಬಿಜೆಪಿ ಬೂತ್ ಸಮಿತಿ 72ರ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಣಿಯೂರು ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣ ಭಟ್. ಎನ್ ದಂಪತಿಗಳಿಗೆ ಅವರ ನಿವಾಸದಲ್ಲಿ ಗುರು ಪೂರ್ಣಿಮೆ ಉತ್ಸವದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ‌ನಡೆಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಬೂತ್ 72 ರ ಅಧ್ಯಕ್ಷರಾದ ನಿರ್ಮಲಾ ಕೇಶವ ಗೌಡ ಅಮೈ, ಕಾರ್ಯದರ್ಶಿ ಅನಿಲ್‌ ಕಂಡಿಗ ,ಪ್ರಮುಖರಾದ ಆನಂದ ಕೂಂಕ್ಯ, ಜ್ಯೋತಿ ಭಟ್, ರಕ್ಷಿತ್ ಕೂಂಕ್ಯ, ಚೇತನ್ ಕೊಯಕ್ಕುಡೆ, ನವೀನ್ ಕೊಯಕ್ಕುಡೆ,ಶ್ರವಣ್ ಕೊಯಕ್ಕುಡೆ, ಯಜ್ಞೇಶ್ ಕೊಡೆಂಕಿರಿ, ಸಚಿನ್ ಸೌತೆಮಾರು, ಅಕ್ಷಯ್ ಬರೆಪ್ಪಾಡಿ ಉಪಸ್ಥಿತರಿದ್ದರು. ನಿರ್ಮಲಾ ಕೇಶವ ಗೌಡ ಅಮೈ ಸ್ವಾಗತಿಸಿ, ಅನಿಲ್ ಕಂಡಿಗ ವಂದಿಸಿದರು.

LEAVE A REPLY

Please enter your comment!
Please enter your name here