ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಾಯ ಎಂಟರ್ಪ್ರೈಸಸ್ 12ನೇ ಶಾಖೆಯು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಜು.14ರಂದು ಶುಭಾರಂಭಗೊಂಡಿತು.
ಕಾಫಿ ಬೆಳೆಗಾರರು ಹಾಗೂ ಕಾಫಿ ಬೋರ್ಡಿನ ನಿವೃತ್ತ ಅಧಿಕಾರಿಯೂ ಆಗಿರುವ ಮೋಹನದಾಸ ಹಾಗೂ ವಕೀಲರು ಮತ್ತು ಅಡಿಕೆ, ಕಾಫಿ ಬೆಳೆಗಾರರು ಆಗಿರುವ ಶಿವಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ನಿವೃತ್ತ ಐ ಐ ಟಿ ಇಂಜಿನಿಯರ್ ಪಿಯುಷ್ ಅಗರ್ವಾಲ್, ಕೃಷಿ ಇಲಾಖೆ ಕೊಡಗು ಜಿಲ್ಲೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಉಪ ನಿರ್ದೇಶಕರಾದ ಸೋಮಶೇಖರ್, ಮಡಿಕೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಪ್ರವೀಣ್ ಹಾಗೂ ಇನ್ನಿತರ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಾಯ ಎಂಟರ್ಪ್ರೈಸಸ್ ಆಡಳಿತ ಮಂಡಳಿಯ ಪ್ರಜ್ವಲ್ ಸಾಯ, ಗೋವಿಂದ ಪ್ರಕಾಶ್ ಸಾಯ ಸ್ವಾಗತಿಸಿ ವಂದಿಸಿದರು. ಸಾಯ ಎಂಟರ್ಪ್ರೈಸಸ್ ನ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ರಾಜನಾರಾಯಣ ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಶ್ಯಾಮ್ ತಮ್ಮಯ್ಯ, ಕವಿತಾ ಉಪಾಧ್ಯಾಯ, ಪ್ರಶಾಂತ್, ಉಲ್ಲಾಸ್, ಜಿತೇಶ್ ಸಹಕರಿಸಿದರು.