ಬೊಳುವಾರಿನಲ್ಲಿ ಹರಿತವಾದ ಆಯುಧ ಪ್ರದರ್ಶನ ! – ಆರೋಪಿ ಪೊಲೀಸ್ ವಶಕ್ಕೆ

0

ಪುತ್ತೂರು: ಬೊಳುವಾರಿನಲ್ಲಿ ಹರಿತವಾದ ಆಯುಧ ಪ್ರದರ್ಶನ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡ ಘಟನೆ ಜು.14ರ ಮಧ್ಯಾಹ್ನ ನಡೆದಿದೆ.

ಬನ್ನೂರು ಮೂಲದ ವ್ಯಕ್ತಿಯೊಬ್ಬರು ಹರಿತವಾದ ಆಯುಧವನ್ನು ದುರಸ್ಥಿಗಾಗಿ ಪುತ್ತೂರು ಪೇಟೆಗೆ ತಂದವರು ಬೊಳುವಾರು ಮಸೀದಿಯ ಬಳಿ ಶರ್ಟ್ ಹಿಂಬದಿ ಸಿಕ್ಕಿಸಿ ಪ್ರದರ್ಶನ ಮಾಡಿದ್ದಾರೆಂದು ಆರೋಪಿಸಲಾಗಿದೆ.

ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here