ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ರೂ.2,03,41,274,70 ವ್ಯವಹಾರ | 3.37 ಲಕ್ಷ ರೂ. ನಿವ್ವಳ ಲಾಭ | 91 ಪೈಸೆ ಬೋನಸ್ |

ಪುತ್ತೂರು: ಪಾಲ್ತಾಡಿ ಗ್ರಾಮದ ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಜು.14 ರಂದು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಹೆಚ್ಚು ಹಾಲು ಶೇಖರಣೆ ಆಗಲಿ- ಡಾ.ಕೇಶವ ಸುಳಿ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಕೇಶವ ಸುಳಿ ಮಾತನಾಡಿ ಹೈನುಗಾರರು ಹಾಲು ಉತ್ಪಾದನೆಯತ್ತ ಹೆಚ್ಚು ಗಮನಹರಿಸಬೇಕು. ಬಂಬಿಲ ಹಾಲು ಸೊಸೈಟಿಗೆ ನೂತನ ಕಟ್ಟಡ ಆಗುತ್ತಿರುವ ವಿಚಾರ ತುಂಬಾ ಸಂತೋಷ ತಂದಿದೆ. ಎಲ್ಲ ರೀತಿಯಿಂದಲೂ ಬಂಬಿಲ ಹಾಲು ಉತ್ವಾದಕರ ಸಹಕಾರ ಸಂಘ ಮುಂಚೂಣಿಯಲ್ಲಿ ಇದೆ. ಮುಂದಿನ ದಿನಗಳಲ್ಲಿ ಪ್ರತಿ ದಿನ ಹೆಚ್ಚು ಹಾಲು ಶೇಖರಣೆ ಆಗಲಿ ಎಂದು ಹೇಳಿದರು.


ಹೆಚ್ಚಿನ ಲಾಭ ಸಂಘದ ಸಾಧನೆ – ಶ್ರೀದೇವಿ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀ ದೇವಿ ಎನ್. ಮಾತನಾಡಿ ಬಂಬಿಲ ಹಾಲು ಉತ್ಪಾದಕರ ಸಂಘಕ್ಕೆ ಕಳೆದ ವರ್ಷಗಿಂತ ಈ ವರ್ಷ ರೂಪಾಯಿ ಒಂದು ಲಕ್ಷ ಹೆಚ್ಚು ಲಾಭ ಬಂದಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಇದು ಸಂಘದ ಸಾಧನೆಯಾಗಿದೆ ಎಂದು ಹೇಳಿ ರೈತರು ಹೆಚ್ಚು ಕ್ರಿಯಾಶೀಲರಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.


ಸಂಘದ ಅಭಿವೃದ್ಧಿಗೆ ಸಹಕರಿಸಬೇಕು- ಜಯಪ್ರಕಾಶ್ ಎನ್.ಆರ್
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್. ವರದಿ ಸಾಲಿನಲ್ಲಿ ಸಂಘವು ರೂ. 2,03,41,274,70 ವ್ಯವಹಾರ ಮಾಡಿದ್ದು, 3.37 ಲಕ್ಷ ರೂ ನಿವ್ವಳ ಲಾಭಗಳಿಸಿದೆ. ಲೀಟರ್‌ಗೆ 91 ಪೈಸೆ ಬೋನಸ್ ನೀಡಲಾಗುವುದು. ಸಂಘದ ಬೆಳವಣಿಗೆಗಾಗಿ ಗುಣಮಟ್ಟದ ಹಾಲು ಪೂರೈಸಬೇಕು. ಹೆಚ್ಚು ಹಾಲು ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಬಹು ವರ್ಷಗಳ ಕನಸಾಗಿರುವ ಸಂಘದ ನೂತನ ಕಟ್ಟಡ ಕಾಮಗಾರಿ ಬೇಗ ಆರಂಭವಾಗಲಿದೆ. ಇದು ಸಂತೋಷವನ್ನು ತಂದಿದೆ ಎಂದು ಹೇಳಿ, ಪ್ರತಿ ಹೈನುಗಾರರು ವರ್ಷದಲ್ಲಿ 180 ದಿವಸ ಸಂಘಕ್ಕೆ ಹಾಲು ಪೊರೈಕೆ ಮಾಡುವಂತೆ ವಿನಂತಿಸಿದರು.


ವರ್ಷದೊಳಗೆ ಕಟ್ಟಡ ಪೂರ್ಣ- ಇಂದಿರಾ ಬಿ.ಕೆ.
ಸಂಘದ ನಿರ್ದೇಶಕಿ ಇಂದಿರಾ ಬಿ.ಕೆ. ಮಾತನಾಡಿ ಸಂಘದ ನೂತನ ಕಟ್ಟಡ ವರ್ಷದೊಳಗೆ ಪೂರ್ಣಗೊಳಿಸಬೇಕೆಂಬ ಯೋಜನೆ ಇದ್ದು, ಇದಕ್ಕೆ ಎಲ್ಲರೂ ಸಹಕಾರವನ್ನು ನೀಡುವಂತೆ ಅವರು ವಿನಂತಿಸಿದರು.


ಸಂಘದ ಸದಸ್ಯರಾದ ವಸಂತ ಗೌಡ ಪರಣೆ, ಸುರೇಶ್ ಬಂಬಿಲ ದೋಳರವರು ವಿವಿಧ ಸಲಹೆ ಸೂಚನೆಯನ್ನು ನೀಡಿದರು. ಸಂಘಕ್ಕೆ ಹೆಚ್ಚು ಹಾಲು ಪೂರೈಸಿ ಪ್ರಥಮ ಸ್ಥಾನ ಪಡೆದ ಜಯಪ್ರಕಾಶ್ ಎನ್.ಆರ್ ದ್ವಿತೀಯ ಗಣೇಶ್ ಬಿ , ತೃತೀಯ ಸುರೇಶ್ ಬಿ ಇವರಿಗೆ ಬಹುಮಾನ ನೀಡಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಸ್ಟೀಲ್ ಪಾತ್ರೆ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಗಣೇಶ್ ನಾಯ್ಕ, ವಿಠಲ ಶೆಟ್ಟಿ, ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕೋಮಲ ಅವರು ವರದಿ ವಾಚಿಸಿದರು. ಹಾಲು ಪರೀಕ್ಷಕಿ ವಿಮಲ ಸಹಕರಿಸಿದರು. ಮುಕ್ಕೂರು ಹಾಲು ಉತ್ವಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಬೆಳಂದೂರು ಗ್ರಾ.ಪಂ, ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.


ಸಂಘದ ನಿರ್ದೇಶಕಿ ಇಂದಿರಾ ಬಿ.ಕೆ ಪ್ರಾರ್ಥಿಸಿ, ಸ್ವಾಗತಿಸಿ ಉಪಾಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ ವಂದಿಸಿದರು. ನಿರ್ದೇಶಕ ಅನ್ನಪೂರ್ಣ ಪ್ರಸಾದ್ ರೈ ಕಾರ‍್ಯಕ್ರಮ ನಿರೂಪಿಸಿದರು.

ಸನ್ಮಾನ ಸಮಾರಂಭ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ವಿಸ್ತರಣಾಧಿಕಾರಿ ನಾಗೇಶ್ ಅವರನ್ನು ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ನಾಗೇಶ್ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here